ಬಾಳೆಹೊನ್ನೂರು ನಾಡಕಚೇರಿಯಲ್ಲಿ 8 ಬ್ಯಾಟರಿ ಕಳವು

bhr nada
ಬಾಳೆಹೊನ್ನೂರಿನ ನಾಡಕಚೇರಿ.
Published on

ಬಾಳೆಹೊನ್ನೂರು: ನಾಡಕಚೇರಿ ಬಾಗಿಲ ಬೀಗ ಮುರಿದು 8 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ.

ಶನಿವಾರ ಕಚೇರಿ ಕೆಲಸ ಮುಗಿದ ಸಿಬ್ಬಂದಿ ಬೀಗ ಹಾಕಿ ತೆರಳಿದ್ದರು. ಸೋಮವಾರ ಸ್ಥಳೀಯರೊಬ್ಬರು ನಾಡ ಕಚೇರಿ ಬಾಗಿಲು ತೆರೆದಿರುವುದನ್ನು ಕಂಡು ಅನುಮಾನಗೊಂಡು ಸಿಬ್ಬಂದಿಗೆ ತಿಳಿಸಿದಾಗ ಬಂದು ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತು. ಶನಿವಾರ ಅಥವಾ ಭಾನುವಾರ ರಾತ್ರಿ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ. ನಾಡಕಚೇರಿ ಉಪ ತಹಸೀಲ್ದಾರ್ ನಾಗೇಂದ್ರ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net