8.87 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ವೆಂಚ್ಯೂರ್ ಸೆಕ್ಯೂರಿಟಿಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ಧಾರವಾಡದ ಸೇಲ್ಸ್‌ಮನ್‌ರಿಂದ 8.87 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಧಾರವಾಡದ ಮುತ್ತೆಪ್ಪ ಎಚ್. ಎಂಬುವರಿಗೆ ದೆಹಲಿ ಮೂಲದ ಪ್ರಿಯಾದೇವಿ, ಪುನಿತ್ ಪುಸ್ಕರ್ ಎಂಬುವರು ವಂಚಿಸಿದ್ದಾರೆ. 8.87 ಲಕ್ಷ ರೂ ಹೂಡಿಕೆ ಮಾಡಿಸಿಕೊಂಡು ಮರಳಿ ಹಣ ವಿತ್ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net