

ಮಡಿಕೇರಿ: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮.೮೦ ಮಿ.ಮೀ. ಮಳೆಯಾಗಿದೆ
.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೩.೨೦ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩.೭೬ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೯.೪೩ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೩.೬೦, ನಾಪೋಕ್ಲು ೩.೪೦, ಸಂಪಾಜೆ ೩೬, ಭಾಗಮಂಡಲ ೯.೮೦, ವಿರಾಜಪೇಟೆ ಕಸಬಾ ೨.೪೦, ಹುದಿಕೇರಿ ೩.೩೦, ಶ್ರೀಮಂಗಲ ೧೫.೪೦, ಪೊನ್ನಂಪೇಟೆ ೧, ಬಾಳೆಲೆ ೦.೫೦, ಸೋಮವಾರಪೇಟೆ ಕಸಬಾ ೪, ಶನಿವಾರಸಂತೆ ೬.೬೦, ಶಾಂತಳ್ಳಿ ೮, ಕೊಡ್ಲಿಪೇಟೆ ೫, ಕುಶಾಲನಗರ ೧, ಸುಂಟಿಕೊಪ್ಪ ೩೨ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೪೨.೭೪ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೧೧೬೨ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೫೦ ಕ್ಯೂಸೆಕ್ ಇದೆ.