ಕಳೆದ ೨೪ ಗಂಟೆಯಲ್ಲಿ ೮.೫೪ ಮಿ.ಮೀ. ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮.೫೪ ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೩.೫ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೫ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧೦.೪೦ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೩.೭೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೦.೫೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೭, ನಾಪೋಕ್ಲು ೪.೮, ಸಂಪಾಜೆ ೮, ಭಾಗಮಂಡಲ ೨೨.೪, ವಿರಾಜಪೇಟೆ ಕಸಬಾ ೭, ಅಮ್ಮತ್ತಿ ೩, ಹುದಿಕೇರಿ ೬.೬, ಶ್ರೀಮಂಗಲ ೨೮, ಪೊನ್ನಂಪೇಟೆ ೨, ಬಾಳೆಲೆ ೫, ಸೋಮವಾರಪೇಟೆ ಕಸಬಾ ೭.೪, ಶನಿವಾರಸಂತೆ ೩, ಶಾಂತಳ್ಳಿ ೩೬, ಕೊಡ್ಲಿಪೇಟೆ ೮.೬, ಸುಂಟಿಕೊಪ್ಪ ೧ ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೦.೮೧ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೨೨೮೭ ಕ್ಯುಸೆಕ್‌ಇದ್ದು, ಇಂದಿನ ನೀರಿನ ಹೊರ ಹರಿವು ನದಿಗೆ ೧೦೦೦ ಕ್ಯುಸೆಕ್ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net