8.31 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಫ್ಲಿಪ್‌ಕಾರ್ಟ್‌ನಲ್ಲಿ ರೇಟಿಂಗ್ ನೀಡುವುದರಿಂದ ಪ್ರತಿದಿನ 8-10 ಸಾವಿರ ರೂ. ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 8.31 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಕನ್ಯಾನಗರದ ಸ್ಯಾಮಸನ್ ವಂಚನೆಗೆ ಒಳಗಾದವರು. ಮೊಬೈಲ್ ಫೋನ್‌ಗೆ ಬಂದ ಸಂದೇಶದಲ್ಲಿ ತಾನು ಸೋಷಿಯಲ್ ಸಿಟಿಆರ್ ಸಲ್ಯೂಷನ್ಸ್‌ನ ಆರ್ಯ ಗುಪ್ತಾ ಎಂದು ಪರಿಚಯಿಸಿಕೊಂಡಿದ್ದಾನೆ. ಸೇಲ್ಸ್‌ನಲ್ಲಿ ಪಾರ್ಟ್ ಟೈಮ್ ಜಾಬ್ ಖಾಲಿ ಇದೆ ಎಂದು ಟಾಸ್ಕ್ ನೀಡಿ, ಪೂರ್ಣಗೊಳಿಸಿದ ನಂತರ ಹಣ ವರ್ಗಾಯಿಸಿ ನಂಬಿಸಿದ್ದಾನೆ. ನಂತರ ಟೆಲಿಗ್ರಾಂಗೆ ಸೇರಿಸಿ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿ ಸ್ಯಾಮಸನ್ ವಿವಿಧ ಬ್ಯಾಂಕ್ ಖಾತೆಯಿಂದ 8,31,600 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net