

ಕಲಬುರಗಿ: ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯನ್ನು ಬಂಧಿಸಿ, ಬಂಧಿತನಿಂದ 8.23 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ವಿಶೇಷ ಕಾರ್ಯಾಚರಣೆಯಲ್ಲಿ ಯಕ್ಬಾಲ್ ಕಾಲನಿಯ ಮಹ್ಮದ್ ಮಸಿಯೋದ್ದಿನ್ ಮೈನೋದ್ದಿನ್ (೩೦)ನನ್ನು ಬಂಧಿಸಿದ್ದು, ಬಂಧಿತನಿAದ ೩,೨೪ ಲಕ್ಷ ರೂ. ಮೌಲ್ಯದ ೧೦,೮೦೦ ಸ್ಟಿçಪ್ ಅಸ್ಟಾç ಸೇಫ್ ಮಾತ್ರೆ, ೪.೫೦ ಲಕ್ಷ ರೂ. ಮೌಲ್ಯದ ೧೮೦೦ ಸ್ಟಿçಪ್ ನಿಟ್ಜಾಕೇರ್-೧೦ ಮಾತ್ರೆ, ೪೮ ಸಾವಿರ ರೂ.ನ ೨೪೦ ಬಾಟಲಿ ಕಫ್ ಸಿರಫ್, ೧೦೫ ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯೂ ಸಿಗರೇಟ್ ಬಾಕ್ಸ್ನಲ್ಲಿಟ್ಟು ನಿಟ್ಜಾಕೇರ್ ಮಾತ್ರೆ ೧೦ಕ್ಕೆ ೩೦ ರೂ. ಇದ್ದು, ೩೦೦ರೂ.ಗೆ ಮಾರುತ್ತಿದ್ದು, ೧೨೫ ರೂ. ಬೆಲೆಯ ಕಫ್ ಸಿರಫ್ ೨೦೦ ರೂ.ಗೆ, ಮಾರಾಟ ಮಾಡುತ್ತಿದ್ದ. ಪರಿಶೀಲನೆ ವೇಳೆ ಮನೆಯಲ್ಲಿ ಒಂದು ತಲವಾರ್ ದೊರಕಿದ್ದು, ಜಪ್ತಿ ಮಾಡಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಜತೆಗೆ ಶಸ್ತಾçಸ್ತç ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸಿಪಿ ಭೂತೇಗೌಡ ನೇತೃತ್ವದಲ್ಲಿ ಆರ್.ಜಿ.ನಗರ ಠಾಣೆಯ ಪ್ರಭಾರ ಪಿಐ ಅರುಣಕುಮಾರ, ಠಾಣೆ ಸಿಬ್ಬಂದಿ ಮಲ್ಲನಗೌಡ, ಸಿಕ್ರೇಶ್ವರ, ರಾಜಕುಮಾರ, ಉಮೇಶ, ಮುಜಾಹೀದ್, ಕರಣಕುಮಾರ, ಆರೇಶ, ಆತ್ಮಕುಮಾರ, ತುಕಾರಾಮ ಸಿಬ್ಬಂದಿ ಭಾಗವಹಿಸಿದ್ದು, ಶ್ಲಾಘನೆ ವ್ಯಕ್ತಪಡಿಸಿದರು.
ಒಂಬತ್ತು ದಿನದ ವಿಶೇಷ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಠಾಣೆಗಳಲ್ಲಿ ಮಾದಕ ವ್ಯಸನಕ್ಕೆ ಸಂಬAಧಿಸಿದAತೆ ೫೦ ಪ್ರಕರಣ ದಾಖಲಿಸಿ, ೫೪ ವ್ಯಸನಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಿಹಾರದಿಂದ ಕೋರಿಯರ್‌ನಿಂದ ಪಾರ್ಸೆಲ್: ಆರೋಪಿ ಮಹ್ಮದ್ ಮಸಿಯೋದ್ದಿನ್ ಮೈನೋದ್ದಿನ್‌ನು ಬಿಕಾಂ ಪದವಿಧರನಾಗಿದ್ದು, ಬೇರೆಯವರ ಹೆಸರಿನಲ್ಲಿ ಪರವಾನಗಿ ಪಡೆದು ಮೆಡಿಕಲ್ ನಡೆಸುತ್ತಿದ್ದ. ಪ್ರಸ್ತುತ ಅದನ್ನು ಬಂದ್ ಮಾಡಿದ್ದು, ಅಕ್ರಮವಾಗಿ ಮತ್ತು ಬರಿಸುವ ನಿದ್ರೆ ಮಾತ್ರೆ ಸೇರಿ ವಿವಿಧ ಮಾದಕ ಮಾತ್ರೆ, ಸಿರಫ್ ಮಾರಾಟದಲ್ಲಿ ತೊಡಗಿದ್ದ. ಬಿಹಾರದಿಂದ ಕೋರಿಯರ್ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ನಗರದ ಎರಡ್ಮೂರು ಮೆಡಿಕಲ್‌ಗಳಲ್ಲೂ ಖರೀದಿ ಮಾಡಿದ್ದ ಎಂಬುದು ತಿಳಿದಿದೆ. ಈ ಕುರಿತು ಡ್ರಗ್ ಕಂಟ್ರೋಲರ್ ಸಹಾಯ ಪಡೆದು, ಪರಿಶೀಲಿಸಿ, ಪ್ರಕರಣ ದಾಖಲಿಸಲಾಗುವುದು ಎಂದು ಡಾ.ಶರಣಪ್ಪ ಎಸ್.ಡಿ. ತಿಳಿಸಿದರು.