

ತೆಲಸಂಗ: ಸಮೀಪದ ಕನ್ನಾಳ ಗ್ರಾಮದ ವಿವಿಧೋದ್ದೇಶ ಪಿಕೆಪಿಎಸ್ ಸಂಘ 8.09 ಲಕ್ಷ ರೂ. ಲಾಭ ಗಳಿಸಿದೆ ಎಂದು
ಅಧ್ಯಕ್ಷ ವೆಂಕಣ್ಣ ಅಸ್ಕಿ ಹೇಳಿದರು.
ಸಮೀಪದ ಕನ್ನಾಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಂಘವು 624 ಸದಸ್ಯರನ್ನು ಹೊಂದಿದ್ದು, 36.77 ಲಕ್ಷ ರೂ. ಷೇರು ಬಂಡವಾಳ, 19.52 ಲಕ್ಷ ರೂ. ಕಾಯ್ದಿಟ್ಟ ನಿಧಿ, 7.58 ಲಕ್ಷ ರೂ. ನಿಧಿ, 2.25 ಕೋಟಿ ರೂ. ಠೇವಣಿ, 2.82 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಿದೆ. 1.95 ಕೋಟಿ ರೂ. ಬಿಡಿಪಿ ಸಾಲ, 6.66 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಹಿರಿಯರಾದ ನಾನೇಗೌಡ ಪಾಟೀಲ, ಬಸವಲಿಂಗ ಹಿರೇಮರ, ಬಸರಗೊಂಡ ಇಸರಗೊಂಡ, ಚಂದ್ರಶೇಖರ ವಳಸಂಗ, ಸತ್ಯೆಪ್ಪ ದಳವಾಯಿ, ಮಾಳಪ್ಪ ದಾಶ್ಯಾಳ, ಕಲ್ಲಪ್ಪ ಗಸ್ತಿ, ರಾಮು ಬಂಗಾರಿ, ಮಲ್ಲಪ್ಪ ಅಸ್ಕಿ, ಶ್ರಾವಣ ರಾಣವಗೋಳ, ಮಹಾದೇವಿ ದಳವಾಯಿ, ಮಾಯವ್ವ ಹಿರೇಕುರಬರ, ರಾಜೀಶ್ರೀ ಮಾಶ್ಯಾಳ, ಧರೆಪ್ಪ ದಳವಾಯಿ ಇತರರಿದ್ದರು.