

ಕೊಳ್ಳೇಗಾಲ : ಪಟ್ಟಣದ ಬಸ್ತೀಪುರ ಗ್ರಾಮದ ಶ್ರೀ ಶನೇಶ್ವರ ದೇವಾಲದಲ್ಲಿ ಜೈನ ಬಸದಿ ದಾಸೋಹ ಸಂಸ್ಥಾನ, ದಕ್ಷಿಣ ಕಾಶಿ ಮಠದ ಸಹಯೋಗದಲ್ಲಿ ಶ್ರೀಸ್ವಾಮಿ ಛಾಯ ದೇವಿ, ಉಮಾಮಹೇಶ್ವರ, ಗಣಪತಿ, ಸಿದ್ದಪ್ಪಾಜಿ, ನವಗ್ರಹ ಮತ್ತು ಬಸವ ದೇವರುಗಳ ಕಾರ್ತೀಕೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮವನ್ನು ನ.7 ರಂದು ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ಸಂಸದ ಸುನಿಲ್‌ಬೋಸ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್. ಮಂಜುನಾಥ್, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎನ್.ಮಹೇಶ್, ಆರ್.ನರೇಂದ್ರ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಎ.ಪಿ.ಶಂಕರ್ ಭಾಗವ ಹಿಸಲಿದ್ದಾರೆ. ಮಧಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ದೇವರುಗಳ ಕಂಡಾಯಗಳ ಉತ್ಸವ ಹಾಗೂ ಕಾರ್ತಿಕೋತ್ಸವ, ಮಹಾಮಂಗಳಾರತಿ ಹಾಗೂ ದೇವಸ್ಥಾನದ ಹಿಂಭಾಗದಲ್ಲಿರುವ ಪುಷ್ಕರಿಣಿಯಲ್ಲಿ ತೆಪ್ಪೋತ್ಸವ ನೆರವೇರಲಿದೆ. ರಾತ್ರಿ 9.30 ಕ್ಕೆ ಭಕ್ತಿ ಗೀತೆಗಳ ಗಾಯನ ಮತ್ತು ಹರಿಕಥೆ ಪ್ರಸ್ತುತಿ ಇದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.