7ನೇ ವೇತನ ಆಯೋಗದಂತೆ ಸೌಲಭ್ಯ ಒದಗಿಸಿ

0110Klb01
Published on

ಕಲಬುರಗಿ: ಏಳನೇ ವೇತನ ಆಯೋಗದ ಶಿಫಾರಸಿನಂತೆ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
೨೦೨೨ರ ಜು.೧ರಿಂದ ೨೦೨೪ರ ಜು.೩೧ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಏಳನೇ ವೇತನ ಆಯೋಗದಂತೆ ಡಿಸಿಆರ್‌ಟಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ ಮೊತ್ತ ನೀಡಬೇಕು. ಪ್ರಸಕ್ತ ೬ನೇ ವೇತನ ಆಯೋಗದ ಪ್ರಕಾರ ಸೌಲಭ್ಯ ನೀಡಲಾಗುತ್ತಿದೆ. ೭ನೇ ವೇತನ ಆಯೋಗದ ಪ್ರಕಾರ ನೀಡುವಂತೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಸರ್ಕಾರಕ್ಕೂ ಮನವರಿಕೆ ಮಾಡಿಕೊಟ್ಟರೂ ಪರಿಹಾರ ದೊರೆತಿಲ್ಲ ಎಂದು ದೂರಿದರು.
ಪ್ರಮುಖರಾದ ಅಶೋಕ ಸಜ್ಜನ್, ಷಣ್ಮುಖಯ್ಯ, ಗುರಣ್ಣ ಆವಟಿ, ನೀಲಕಂಠಯ್ಯ ಹಿರೇಮಠ, ಗಣೇಶ ಚಿನ್ನಾಕಾರ, ನಾಗಪ್ಪ ನೆಲೋಗಿ, ಮಲ್ಲಿಕಾರ್ಜುನ, ಮಡಿವಾಳಯ್ಯ ಸ್ವಾಮಿ, ವಿಜಯಕುಮಾರ ಕಂಚನಾಳ ಇತರರಿದ್ದರು. ವಿಶ್ವ ಹಿರಿಯ ನಾಗರಿಕರ ದಿನ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪರಿಷ್ಕೃತ ಆದೇಶ ಶೀಘ್ರ ಹೊರಡಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net