

ಕಲಬುರಗಿ: ರಾಜ್ಯದಲ್ಲಿ ೨೦೨೨ ಜುಲೈ ೧ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ೨೬,೪೨೩ ಅಧಿಕಾರಿ, ನೌಕರ ವರ್ಗದವರಿದ್ದು, ಅವರಿಗೆ ೭ನೇ ವೇತನ ಆಯೋಗದ ಅನುಷ್ಠಾನದಂತೆ ನಿವೃತ್ತಿಯಲ್ಲಿ ನೀಡುವ ಎಲ್ಲ ಆರ್ಥಿಕ ಸೌಲಭ್ಯ ನೀಡಬೇಕು ಎಂದು ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಗುಣ್ಣ ಆವಂಟಿ ಆಗ್ರಹಿಸಿದರು.
೬ನೇ ವೇತನ ಆಯೋಗದಂತೆ ನಿವೃತ್ತ ಆರ್ಥಿಕ ಸೌಲಭ್ಯ ನೀಡುತ್ತಿರುವುದರಿಂದ ಎ ದರ್ಜೆಯಿಂದ ಡಿ ದರ್ಜೆಯ ನೌಕರರಿಗೆ ಸುಮಾರು ೬ ಲಕ್ಷದಿಂದ ೨೨ ಲಕ್ಷ ರೂ.ವರೆಗೆ ಆರ್ಥಿಕ ನಷ್ಟವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
೭ನೇ ವೇತನ ಆಯೋಗದಂತೆ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಡಿ.೧೬ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಿವೃತ್ತ ನೌಕರರು ಸಮಾವೇಶಗೊಂಡು ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಿz್ದೆÃವೆ ಎಂದು ತಿಳಿಸಿದರು. ಸಂಚಾಲಕ ಭರತರಾಜ್ ಸಾವಳಗಿ, ವಸಂತ ಪುಲಾರೆ, ನಾಗಪ್ಪ ನೆಲೋಗಿ ಇತರರಿದ್ದರು.