

ವಿಜಯವಾಣಿ ಸುದ್ದಿಜಾಲ ಗದಗ
ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ ಜು.1, 2022 ರಿಂದ ಜು.31, 2024ರ ಒಳಗೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರರನ್ನು ಪರಿಷತ ವೇತನ ಶ್ರೇಣಿಯಲ್ಲಿ ನಿವತ್ತಿ ಸೌಲಭ್ಯ ನೀಡುವಂತೆ ಕರ್ನಾಟಕ ನಿವೃತ್ತ ನೌಕರರ ವೇದಿಕೆಯು ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ವೇದಿಕೆಯ ಸಂಚಾಲಕ ಶಂಕರ ಹೂಗಾರ, ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ಜು. 1, 2020 ರಿಂದ ಜು.31, 2024ರ ವರೆಗೆ ನಿವೃತ್ತಿ ಹೊಂದಿದವರನ್ನು ಪರಿಗಣಿಸಬೇಕು. ನಮ್ಮನ್ನು ಹಳೆಯ ವೇತನ ಶ್ರೇಣಿಯಲ್ಲೇ ಪರಿಗಣಿಸುತ್ತಿರುವುದು ಆಘಾತವಾಗಿದೆ. 7ನೇ ವೇತನ ಆಯೋಗದ ವರದಿಯಂತೆ ಪರಿಸತ ವೇತನದಲ್ಲಿ ನಿವೃತ್ತಿ ಆಥಿರ್ಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಿ. ಹೆಚ್. ಕಡಿವಾರ, ವೈ. ಕೆ. ಚೌಡಾಪೂರ, ಎಸ್. ಎಸ್. ತಳ್ಳಿಹಾಳ, ಕೆ. ಎಚ್. ಗಂಗೂರ, ವಿ. ವಿ. ಅಡಗತ್ತಿ, ಯು. ಎಂ. ಹಾದಿಮನಿ, ಎಚ್. ಸಿ. ಕಾಂಬಳೇಕರ ಹಲವರು ಇದ್ದರು.