ಕಾರದಗಾ ಗ್ರಾಮದಲ್ಲಿ 7ನೇ ಕನ್ನಡ ಸಮಾವೇಶ

25BRG1
ಸುದ್ದಿಗೋಷ್ಟಿಯಲ್ಲಿ ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ ಮಾತನಾಡಿದರು. ಪದ್ಮಾವತಿ ಅಲಂಕಾರ, ರಶಿದಾ ಪಟೇಲ, ಮಾನೀಕ ಚಂದಗಡೆ ಇತರರಿದ್ದರು.
Published on

ಬೋರಗಾಂವ: ಕನ್ನಡ ಬಳಗ ಕಾರದಗಾ ಆಶ್ರಯದಲ್ಲಿ ಡಿ.29ರಂದು 7ನೇ ಕನ್ನಡ ಸಮಾವೇಶ ಹಮ್ಮಿಕೊಂಡಿದ್ದು, ಜೈನ ಮಿಲನದ ರಾಷ್ಟ್ರೀಯ ಅಧ್ಯಕ್ಷ ಡಿ.ಸುರೇಂದ್ರಕುಮಾರ ಸರ್ವಾಧ್ಯಕ್ಷರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಸಮಾವೇಶದ ಗೌರವಾಧ್ಯಕ್ಷ ರಾಜು ಖಿಚಡೆ ಮಾಹಿತಿ ನೀಡಿದರು.

ಸಮೀಪದ ಕಾರದಗಾ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಮಾವೇಶ ಆಯೋಜಿಸಿದ್ದು, ಡಿ.ಎಸ್.ನಾಡಗೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಸಚಿವ ಸತೀಶ ಜಾರಕಿಹೊಳಿ ಸಮಾವೇಶ ಉದ್ಘಾಟಿಸುವರು. ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ ಹಾಗೂ ಸದಲಗಾದ ದರಿಖಾನ ಅಜ್ಜನವರು ಸಾನ್ನಿಧ್ಯ ವಹಿಸುವರು. ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ ದೀಪ ಬೆಳಗಿಸುವರು. ಶಾಸಕ ಗಣೇಶ ಹುಕ್ಕೇರಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ವೀರಕುಮಾರ ಪಾಟೀಲ ಗ್ರಂಥ ಬಿಡುಗಡೆ ಮಾಡುವರು. ಲಕ್ಷ್ಮಣ ಚಿಂಗಳೆ ಬಹುಮಾನ ವಿತರಿಸುವರು. ಮುಖಂಡ ಉತ್ತಮ ಪಾಟೀಲ ಸಭಾಮಂಟಪ ಉದ್ಘಾಟಿಸುವರು. ಅಣ್ಣಾಸಾಹೇಬ ಹವಲೆ ವೇದಿಕೆ ಉದ್ಘಾಟಿಸುವರು. ಶಾಸಕಿ ಶಶಿಕಲಾ ಜೊಲ್ಲೆ, ಮಹಾರಾಷ್ಟ್ರ ಶಾಸಕ ರಾಹುಲ ಆವಾಡೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಸುಭಾಷ ಜೋಶಿ, ಕಾಕಾ ಪಾಟೀಲ, ಮೃಣಾಲ್ ಹೆಬ್ಬಾಳ್ಕರ್, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಅಲಂಕಾರ ಸೇರಿ ಇತರರು ಬಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕಾರ್ಯದರ್ಶಿ ಮಾಣಿಕ ಚಂದಗಡೆ, ಶಕುಂತಲಾ ಕಮತೆ ಸಮಾವೇಶದ ಕುರಿತು ಮಾಹಿತಿ ನೀಡಿದರು. ಡಾ.ಎ.ಎ.ಮುರಾಬಟ್ಟೆ, ಮಾನಿಕ ಚಂದಗಡೆ, ಕಿರಣ ಸದಲಗೆ, ಸಂಜಯ ಗಾವಡೆ, ಮಹಾವೀರ ಪಾಟೀಲ, ಸುಭಾಷ ಠಕಾಣೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net