ತುಮಕೂರು ಜಿಲ್ಲೆಯಲ್ಲಿ 79 ಹೊಸ ಕರೊನಾ ಪ್ರಕರಣಗಳು

13Tmk_Corona_Emergency
Published on

ತುಮಕೂರು: ಉಪಚುನಾವಣೆ ಬಳಿಕ ಶಿರಾ ಕರೊನಾ ಹಾಟ್ ಸ್ಪಾಟ್ ಆಗುವುದು ನಿಶ್ಚಿತವಾದಂತೆ ಕಾಣುತ್ತಿದೆ. ಶುಕ್ರವಾರ 29 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1935ಕ್ಕೇರಿದೆ.

ಜಿಲ್ಲೆಯಲ್ಲಿ ಶುಕ್ರವಾರ 79 ಹೊಸ ಪ್ರಕರಣಗಳು ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 912ಕ್ಕಿಳಿದಿದೆ. 98 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು ಈವರೆಗೆ ಕರೊನಾದಿಂದ 19873 ಜನರು ಗುಣಮುಖರಾದಂತಾಗಿದೆ.

ತುಮಕೂರು 21, ತಿಪಟೂರು 8, ಪಾವಗಡ 7, ಗುಬ್ಬಿ 4, ಮಧುಗಿರಿ 4, ತುರುವೇಕೆರೆ 3, ಚಿಕ್ಕನಾಯಕನಹಳ್ಳಿ 2, ಕುಣಿಗಲ್ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು 79 ಮಂದಿಯಲ್ಲಿ ಸೋಂಕು ತಗುಲಿದೆ. ಸತತ 2ನೇ ದಿನ ಯಾವುದೇ ಸಾವು ಸಂಭವಿಸದಿರುವುದು ಸ್ವಲ್ಪ ಮಟ್ಟಿನ ನಿರಾಳತೆ ತಂದಿದೆ. ಈವರೆಗೆ ಜಿಲ್ಲೆಯಲ್ಲಿ 21219 ಜನರಿಗೆ ಕರೊನಾ ದೃಢವಾಗಿದ್ದು, ವಿವಿಧ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ 81 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ 434 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಎಲ್‌ಇಡಿ ಪ್ರಚಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ವತಿಯಿಂದ ಕರೊನಾ ಕುರಿತು ಜಾಗೃತಿ ಮೂಡಿಸುವ ಎಲ್‌ಇಡಿ ಪ್ರಚಾರ ವಾಹನಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಹಸಿರು ನಿಶಾನೆ ತೋರಿಸಿದರು. ಈ ವಾಹನವು ಹತ್ತು ತಾಲೂಕುಗಳ ಆಯ್ದ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸಲಿದೆ.

ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಜಿಪಂ ಸಿಇಓ ಶುಭಾ ಕಲ್ಯಾಣ್, ಉಪ ಕಾರ್ಯದರ್ಶಿ ರಮೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಸಿಪಿಓ ಬಾಲರಾಜ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net