

ಚಿತ್ರದುರ್ಗ: ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ವಿವಿಧೆಡೆ 78.42 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಸಂಸದ ಗೋವಿಂದ ಎಂ. ಕಾರಜೋಳ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ಗಾಂಧಿನಗರ, ಐಯುಡಿಪಿ ಲೇಔಟ್ ಹತ್ತಿರ ಕೆಳಗೋಟೆಯಲ್ಲಿ 15.72 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ, ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ 16.57 ಲಕ್ಷ ರೂ. ವೆಚ್ಚದಲ್ಲಿ ಪಾತ್ವೆ, ಪೆವಿಲಿಯನ್ ಹಾಗೂ ಯೋಗಾಸನ ಪ್ಲಾಟ್‌ಫಾರಂ, ವಿಷ್ಣುವರ್ಧನ ಪಾರ್ಕ್‌ಗೆ ತಂತಿಬೇಲಿ, ವಿದ್ಯುತ್‌ದೀಪ ಅಳವಡಿಕೆ, ತುರುವನೂರು ರಸ್ತೆ ರೈಲ್ವೆ ಅಂಡರ್‌ಪಾಸ್ ಪಿಳ್ಳೇಕೆರನಳ್ಳಿ ಬಳಿ 10.90 ಲಕ್ಷ ರೂ.ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ ಹಾಗೂ ಪಿಳ್ಳೇಕೆರನಹಳ್ಳಿಯಲ್ಲಿ 9.53 ಲಕ್ಷ ರೂ.ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿ, ಬಿವಿಕೆಎಸ್ ಲೇಔಟ್ ಮತ್ತು ತಾಜ್ಪೀರ್ ಲೇಔಟ್‌ನಲ್ಲಿ 20.97 ಲಕ್ಷ ರೂ.ವೆಚ್ಚದ ಉದ್ಯಾನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಆಯುಕ್ತ ಸೋಮಶೇಖರ್, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು, ನಗರಸಭೆ ಸದಸ್ಯರು ಇದ್ದರು.