78 ಕುರಿಗಳು ಸಜೀವ ದಹನ

MND Sheep
Published on

ಮುಂಡಗೋಡ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 78 ಕುರಿಗಳು ಸಜೀವ ದಹನವಾದ ಘಟನೆ ಪಟ್ಟಣದ ಹೊರ ವಲಯದಲ್ಲಿ ಬುಧವಾರ ಸಂಭವಿಸಿದೆ.

ನಜೀರ ಅಹ್ಮದ ದರ್ಗಾವಾಲೆ ಎಂಬುವವರು ಅಮ್ಮಾಜಿಕೆರೆ ಸನಿಹದ ಹೊಲದಲ್ಲಿ ಘಟಕ ನಿರ್ಮಿಸಿ 78 ಕುರಿಗಳನ್ನು ಸಾಕಿದ್ದರು. ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಜೀವ ದಹನವಾಗಿವೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಎಲ್ಲ ಕುರಿಗಳು ಸುಟ್ಟು ಕರಕಲಾಗಿದ್ದವು. ಂದಾಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net