ಸ್ಪರ್ಶ ನರ್ಸಿಂಗ್ ಸೈನ್ಸಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ.

_20230817_145006
Published on

ಗದಗ : ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿರುವ ಸ್ಪರ್ಶ ನರ್ಸಿಂಗ್ ಸೈನ್ಸಸ್ ಕಾಲೇಜಿನಲ್ಲಿ 77ನೇ ದ್ವಜಾರೋಹಣ ಕಾರ್ಯಕ್ರಮವನ್ನು ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ರವರು ನೆರವೇರಿಸಿದರು.

ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಭಾರತ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ವೀರರನ್ನು ಸ್ಮರಿಸುವುದು, ಗೌರವಿಸುವುದು ನಮ್ಮ ಜವಾಬ್ದಾರಿ, ಆಗಸ್ಟ್ 15 ಪ್ರತಿ ಭಾರತೀಯರ ಪಾಲಿನ ಹೆಮ್ಮೆಯ ದಿನವಾಗಿದೆ, ಬ್ರಿಟಿಷರ ಆಳ್ವಿಕೆ ಎಂಬ ಬಂಧನದ ಬೇಡಿ ಕಳಚಿಕೊಂಡ ದಿನವಾಗಿದೆ, ಈ ಸುದಿನದ ಹಿಂದೆ ಅದೆಷ್ಟು ಕೆಚ್ಚೆದೆಯ ವೀರರ ಬಲಿದಾನಗಳಿವೆ, ತ್ಯಾಗದ ಕಥೆಗಳಿವೆ ಕೊನೆಗೆ ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು, ಈ ಮಹತ್ವದ ದಿನಕ್ಕಾಗಿ ಅಸಂಖ್ಯಾತ ಹೋರಾಟಗಾರರು ಸಂಕಲ್ಪ ತೊಟ್ಟಿದ್ದರು, ಧೈರ್ಯದಿಂದ ಹೋರಾಡಿದ್ದರು, ಕಠಿಣ ಹಾದಿಯನ್ನು ಶ್ರಮಿಸಿ ದೇಶ ಪ್ರೇಮದ ಕಿಚ್ಚು  ಹಚ್ಚಿದರು, ಅಂತ ವೀರರ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಮುನ್ನುಗ್ಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪ್ರಾಚಾರ್ಯರಾದ  ಡಾ. ಗಂಗೂಬಾಯಿ ಪವಾರ ರವರು ಮಾತನಾಡಿ  ನಮ್ಮ ಶಾಂತಿ ನೆಮ್ಮದಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಮುಖ ಅವಕಾಶವಿದು, ಉಜ್ವಲ ನಾಳೆಗಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ. ಸ್ವಾತಂತ್ರ್ಯವನ್ನು ಪಡೆಯುವುದು ಕಷ್ಟ, ಆದರೆ ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ನಾವಿಂದು ಸ್ವಾತಂತ್ರ್ಯದ ಸಿಹಿಯನ್ನು ಅನುಭವಿಸುತ್ತಿದ್ದೇವೆ ನಮ್ಮತನವನ್ನು ಗೌರವಿಸುವ ಸ್ವಾತಂತ್ರ್ಯದ ಮಹಾನ್ ಜಯವನ್ನು ಸಂಭ್ರಮಿಸೋಣ. ಈ ಸ್ವಾತಂತ್ರ್ಯದ ದಿನದಂದು ನಮ್ಮ ಹಿಂದಿನ ಸಾಧನೆಗಳನ್ನು ಆನಂದಿಸುವ ವರ್ತಮಾನವನ್ನು ಪ್ರೀತಿಸೋಣ ಭರವಸೆಯ ಪೂರ್ಣ ಭವಿಷ್ಯವನ್ನು ಸ್ವೀಕರಿಸೋಣ ಎಲ್ಲರಿಗೂ ಸ್ವಾತಂತ್ರ್ಯದ ದಿನಾಚರಣೆಯ ಶುಭಾಶಯಗಳು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿಗಳಾದ ರಂಗನಾಥ ಎಂ. ವಿ. ರವರು ನಮ್ಮ ರಾಷ್ಟ್ರವನ್ನು ಇನ್ನಷ್ಟು ಸಮೃದ್ಧ, ಶಾಂತಿ, ಸಂತೋಷದಾಯಕ ನೆಲವನ್ನಾಗಿ ಮಾಡಲು ನಾವು ಏನನ್ನಾದರೂ ಮಾಡಬೇಕೆಂದು ಇಂದು ಪಣ ತೊಡೋಣ. ಸ್ವಾತಂತ್ರ್ಯ ವೀರರೆ ನಿಮ್ಮ ತ್ಯಾಗ, ಬಲಿದಾನ, ಪರಿಶ್ರಮ, ಕೆಚ್ಚೆದೆಯ ಹೋರಾಟ ಸದಾ ನಮ್ಮ ಹೃದಯದಲ್ಲಿ ಅಮರ, ಸೂರ್ಯ ಚಂದ್ರ ಇರುವ ತನಕ ನಿಮ್ಮ ಕೀರ್ತಿ ಶಾಶ್ವತ, ಸ್ವಾತಂತ್ರ್ಯವನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ, ಬ್ರಿಟಿಷ್ ರಾಜ್ಯದ ವಿರುದ್ಧ ವರ್ಷಾನುಗಟ್ಟಲೆ ಹೋರಾಟದ ಫಲವಾಗಿ ನಾವಿದನ್ನು ಗಳಿಸಿದ್ದೇವೆ, ಹಿರಿಯರು ಕಷ್ಟಪಟ್ಟು ನೀಡಿದ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಜೀವಿಸೋಣ ಎಂದರು.

ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಾಚಾರ್ಯರಾದ ಶ್ರೀ ಡಿ. ಬಿ. ಮಧುಸೂದನ್, ವಿಡಿಎಸ್ ಕ್ಲಾಸಿಕ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಆರ್ ಡೊಳ್ಳಿನ ರವರು ಉಪಸಿತರಿದ್ದರು.

ವಿದ್ಯಾರ್ಥಿಗಳಾದ ಕು. ಪೂಜಾ ಯಾವಗಲ್, ಕು. ಯಮನೂರ ಕುಮಾರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  ನಂತರ ಪವಿತ್ರ ಹಾಗೂ ಸಂಗಡಿಗರು, ಕಲಕೇಶ ಹಾಗೂ ಸಂಗಡಿಗರು ದೇಶಭಕ್ತಿ ಗೀತೆಯನ್ನು ಹಾಡಿದರು, ಪೂಜಾ ಹಾಗೂ ಸಂಗಡಿಗರು  ಕಿರು ಚಿತ್ರವನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಾದ ಸುಮತಿ ಹಾಗೂ ಬಸಮ್ಮ ಗೊಲ್ಲರ  ಪ್ರಾರ್ಥಿಸಿದರು, ಪ್ರೊ. ಸವಿತಾ ಕೆ ಸ್ವಾಗತಿಸಿ, ನಿರೂಪಿಸಿದರು. ಪ್ರೊ. ಪೂಜಾ. ಆರ್. ಎಚ್. ಕಾರ್ಯಕ್ರಮವನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳು ಕಾಲೇಜಿನ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net