77 ವರ್ಷಗಳಲ್ಲೇ ಗರಿಷ್ಠ ವಿದ್ಯುತ್ ಉತ್ಪಾದನೆ

11kgl1
ಮಹಾತ್ಮ ಗಾಂ ಹೈಡ್ರೋ ಎಲೆಕ್ಟ್ರಿಸಿಟಿ ಜನರೇಟಿಂಗ್ ಸ್ಟೇಷನ್‌ನ ವಿದ್ಯುತ್ ಕೇಂದ್ರದ ಒಳಾಂಗಣ ಚಿತ್ರ.
Published on

ಕಾರ್ಗಲ್: ಮಹಾತ್ಮ ಗಾಂ ಹೈಡ್ರೋ ಎಲೆಕ್ಟ್ರಿಸಿಟಿ ಜನರೇಟಿಂಗ್ ಸ್ಟೇಷನ್‌ನ ವಿದ್ಯುತ್ ಕೇಂದ್ರವು 2025ರ ಆಗಸ್ಟ್‌ನಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿದೆ.

ಆಗಸ್ಟ್‌ನಲ್ಲಿ 68.4548 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಇದು 77 ವರ್ಷಗಳಲ್ಲಿಯೇ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಿದೆ. ಈ ವಿದ್ಯುದಾಗಾರವು 1948ರಲ್ಲಿ ನಿರ್ಮಾಣವಾಗಿದ್ದು ಇಲ್ಲಿಯವರೆಗಿನ ಅಕ ವಿದ್ಯುತ್ ಉತ್ಪಾದನೆಗಳಲ್ಲಿ 2025ನೇ ಸಾಲಿನ ಉತ್ಪಾದನೆಯೇ ಅಕವಾಗಿದೆ.

ಈ ಹಿಂದೆ 2016ರ ಮಾರ್ಚ್‌ನಲ್ಲಿ ಮಾಸಿಕ ಗರಿಷ್ಠ 62.50 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಲಾಗಿತ್ತು. ಇದೀಗ ಅದನ್ನು ಮೀರಿಸುವಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೆಪಿಸಿ ವಿದ್ಯುತ್ ವಿಭಾಗದ ಚೀಫ್ ಇಂಜಿನಿಯರ್ ಎಚ್.ಆರ್.ರಮೇಶ್, ನಿಗಮದ ಎಲ್ಲ ಇಂಜಿನಿಯರ್‌ಗಳು, ಉದ್ಯೋಗಿಗಳು ಹಾಗೂ ಇತರ ನೌಕರರು ಹಗಲಿರುಳೂ ಶ್ರಮಿಸಿದ ಪರಿಣಾಮ ಆಗಸ್ಟ್‌ನಲ್ಲಿ 68.4548 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದೆ. ಅಲ್ಲದೆ ಆ.31ರಂದು ಒಂದೇ ದಿನ 2.3687 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು ಇದು ಮತ್ತೊಂದು ದಾಖಲೆಯಾಗಿದೆ.

ಮಹಾತ್ಮ ಗಾಂ ವಿದ್ಯುದಾಗಾರವು 120 ಮೆಗಾವಾಟ್ ಸಾಮರ್ಥ್ಯದೊಂದಿಗೆ 1948ರಲ್ಲಿ ಕಾರ್ಯಾರಂಭ ಮಾಡಿ ತದನಂತರ 2001-02ನೇ ಸಾಲಿನಲ್ಲಿ 139.20 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯಕ್ಕೆ ವಿದ್ಯುತ್ ಘಟಕಗಳ ನವೀಕರಣಗೊಳಿಸಿ ಉನ್ನತೀಕರಣಗೊಳಿಸಲಾಯಿತು. ಒಟ್ಟು 8 ಯೂನಿಟ್‌ಗಳನ್ನು ಹೊಂದಿರುವ ವಿದ್ಯುದಾಗಾರವು ಪ್ರಸ್ತುತ 139.20 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net