ಕುಂದಗೋಳ ತಾಲೂಕಿನಲ್ಲಿ 77 ಮನೆಗಳಿಗೆ ಹಾನಿ

25 KDL MR PATIL
Published on

ಕುಂದಗೋಳ: ತಾಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಆರಂಭವಾಗದೆ, ಜನ ಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದಾಗಿ ರೈತಾಪಿ ವರ್ಗ ಹಾಗೂ ಶಾಲಾ-ಕಾಲೇಜ್​ಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಕಾರ್ವಿುಕರಿಗೆ ಸಮಸ್ಯಯಾಗುತ್ತಿದೆ.

ತಾಲೂಕಿನಲ್ಲಿ ಮಳೆಯಿಂದಾಗಿ ಈವರೆಗೆ 77 ಮನೆಗಳು ಹಾನಿಯಾಗಿವೆ. ಅದರಲ್ಲಿ 76 ಮನೆಗಳು ಭಾಗಶಃ ಹಾಗೂ ಒಂದು ಮನೆ ತೀವ್ರ ಹಾನಿಯಾಗಿದೆ.

ಮಂಗಳವಾರ ಮಳೆಯಿಂದಾಗಿ ಬಿದ್ದಿರುವ ರಮೇಶ ಮಡಿವಾಳರ, ಯಲ್ಲಪ್ಪ ತಳವಾರ, ವಿಶ್ವನಾಥ ಅಂಗಡಿ ಮನೆಗಳಿಗೆ ಶಾಸಕ ಎಂ.ಆರ್. ಪಾಟೀಲ ಭೇಟಿ ನೀಡಿ, ಸರ್ಕಾರದಿಂದ ಅಗತ್ಯ ನೆರವು ನೀಡಲು ತಹಸೀಲ್ದಾರ್​ಗೆ ಸೂಚಿಸಿದರು.

ತಾಪಂ ಇಒ ಡಾ. ಮಹೇಶ ಕುರಿ, ಪಪಂ ಮುಖ್ಯಾಧಿಕಾರಿ ಎನ್.ಕೆ. ಡೊಂಬರ, ದಾನಪ್ಪ ಗಂಗಾಯಿ, ಕೆ.ಬಿ. ಕೋರಿ, ಮಾಲತೇಶ ಶ್ಯಾಗೋಟಿ, ಎನ್.ಎನ್. ಪಾಟೀಲ, ನಾಗರಾಜ ಶಿಭರಗಟ್ಟಿ, ಸತೀಶ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net