

ಮಂಗಳೂರು: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಲೆಕ್ಕಪರಿಶೋಧಕರ ಸೇವೆ ಹಾಗೂ ಕೊಡುಗೆ ಬಹುದೊಡ್ಡದಿದೆ. ಲೆಕ್ಕಪರಿಶೋಧಕರು ತಮ್ಮ ವೃತ್ತಿ ಕೌಷಲ್ಯದ ರಕ್ಷಣೆಯ ಜತೆಗೆ ತಮ್ಮ ಆರೋಗ್ಯದ ಕಾಲಜಿ ಹೆಚ್ಚಾಗಿ ವಹಿಸುವ ಅಗತ್ಯ ಇದೆ ಎಂದು ಕಾರ್ಡಿಯೋಲಜಿ ಎಟ್ ಡೋರ್ ಸ್ಟೆಪ್ಸ್ ೌಂಡೇಶನ್ ಅಧ್ಯಕ್ಷ, ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹೇಳಿದರು.
ಪಡೀಲ್‌ನ ಐಸಿಎಐ ಭವನದಲ್ಲಿ ಸೋಮವಾರ ದಿ ಇನ್‌ಸ್ಟಿಟ್ಯೂಟ್ ಆ್ ಚಾರ್ಟರ್ಡ್ ಅಕೌಂಟೆಂಟ್ಸ್ ಆ್ ಇಂಡಿಯಾದ ಮಂಗಳೂರು ಶಾಖೆ ವತಿಯಿಂದ ಆಯೋಜಿಸಿದ್ದ 76ನೇ ಸಿಎ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಸ್ವಾಸ್ಥ್ಯಕ್ಕಾಗಿ ಮಹತ್ವದ ಕೊಡುಗೆ ನೀಡುತ್ತಿರುವ ಸಿಎಗಳು ವೈಯಕ್ತಿಕ ಆರೋಗ್ಯ ಕಾಪಾಡಲು ಕಾಳಜಿ ವಹಿಸಬೇಕು. ಆರೋಗ್ಯ ಸಮಸ್ಯೆಗಳು ವೇತ್ತಿಜೀವನದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಬಹುತೇಕ ಜನ ಬಾಹ್ಯವಾಗಿ ಆರೋಗ್ಯವಂತರಂತೆ ಕಂಡರೂ, ಕಾಲ ಕಾಲಕ್ಕೆ ತಪಾಸಣೆ ಮೂಲಕ ಸಮಸ್ಯೆ ತಿಳಿದುಕೊಂಡು ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದರು.
ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಗೌತಮ್ ಪೈ ಡಿ. ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ದಿ ಇನ್‌ಸ್ಟಿಟ್ಯೂಟ್ ಆ್ ಚಾರ್ಟರ್ಡ್ ಅಕೌಂಟೆಂಟ್ಸ್ ಆ್ ಇಂಡಿಯಾದ ಪದಾಧಿಕಾರಿ ಪ್ರಶಾಂತ್ ಪೈ ಉಪಸ್ಥಿತರಿದ್ದರು.
ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಗೌತಮ್ ಪೈ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಡೇನಿಯಲ್ ಮಾರ್ಷ್ ಪಿರೇರಾ ವಂದಿಸಿದರು. ಎಂ.ಎನ್.ಪೈ ಕಾರ್ಯಕ್ರಮ ನಿರೂಪಿಸಿದರು.
--------------
ಜನರ ಸ್ವಾಸ್ಥ್ಯ ಕಾಪಾಡುವ ವೈದ್ಯರಿಗೆ ಪ್ರತಿ ಕ್ಷಣವೂ ಪ್ರಾಮುಖ್ಯವಾಗಿದೆ. ಲೆಕ್ಕಪರಿಶೋಧಕರು ಕಾಲ ಕಾಲಕ್ಕೆ ಲೆಕ್ಕಾಚಾರಗಳನ್ನು ಇಟ್ಟುಕೊಳ್ಳದಿದ್ದರೆ ಬಹಳಷ್ಟು ನಷ್ಟವಾಗುತ್ತದೆ. ಹಾಗಾಗಿ ವೈದ್ಯರು ಮತ್ತು ಸಿಎಗಳು ಜಾಗರೂಕತೆಯಿಂದ ಒತ್ತಡದಿಂದ ಕೆಲಸ ಮಾಡುತ್ತೇವೆ. ನಮ್ಮ ವೃತ್ತಿ ಬೇರೆಯಾದರೂ ಎರಡೂ ಕಡೆ ಬಹಳಷ್ಟು ಜವಾಬ್ದಾರಿಗಳಿವೆ.
ಡಾ.ಪದ್ಮನಾಭ ಕಾಮತ್, ಹೃದ್ರೋಗ ತಜ್ಞ
ಕಾರ್ಡಿಯೋಲಜಿ ಎಟ್ ಡೋರ್ ಸ್ಟೆಪ್ಸ್ ೌಂಡೇಶನ್ ಅಧ್ಯಕ್ಷ