75ರ ಕಾಮಗಾರಿ ಅವೈಜ್ಞಾನಿಕವಾಗಿದ್ದುಲೋಕಾಯುಕ್ತ ತನಿಖೆನಡೆಸಬೇಕು: ಜಾನ್ ಹೆನ್ರಿ

75ರ ಕಾಮಗಾರಿ ಅವೈಜ್ಞಾನಿಕವಾಗಿದ್ದುಲೋಕಾಯುಕ್ತ ತನಿಖೆನಡೆಸಬೇಕು: ಜಾನ್ ಹೆನ್ರಿ
Published on

ಹಾಸನ : ಕಳೆದ 8 ವರ್ಷಗಳಿಂದ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆನಡೆಸಬೇಕು ಎಂದು ದಲಿತ ಸಂಘರ್ಷ ಸಮಿತಿ ಅಲ್ಪ ಸಂಖ್ಯಾತರ ಘಟಕದ ಸಂಚಾಲಕ ಜಾನ್ ಹೆನ್ರಿ ಒತ್ತಾಯಿಸಿದರು.

ಆಮೆ ವೇಗದ ರಸ್ತೆ ಕಾಮಗಾರಿಯಿಂದ ಒಂದೆಡೆ ಜನರು ಸಂಕಷ್ಟ ಎದುರಿಸುತ್ತಿದು,್ದ ಇನ್ನೊಂದೆಡೆ ಅವೈಜ್ಞಾನಿಕ ಕಾಮಗಾರಿ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಿ ವೈಜ್ಞಾನಿಕ ರಸ್ತೆ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸ ಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಾಗೆ ಗ್ರಾಮದಲ್ಲಿ ಅಂಡರ್ ಪಾಸ್ ಇಲ್ಲದೆ ರಸ್ತೆ ನಿರ್ಮಾಣ ಮಾಡ ಲಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದೆ. ಇದರಿಂದ ರಸ್ತೆ ದಾಟುವ ವೇಳೆ ಈಗಾಗಲೇ ಅನೇಕ ಅಪಘಾತ ಗಳು ನಡೆಯು ತ್ತಿದ್ದು ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದರು.

ದಸಂಸ ಮುಖಂಡ ಬಸವರಾಜ್ ಬೇಳಗೂಡು ಮಾತನಾಡಿ,ರಸ್ತೆಯ ಅಲ್ಲಲ್ಲಿ ನಿರ್ಮಿಸಲಾಗಿರುವ ಮೋರಿಗಳು ಕಳಪೆಯಿಂದ ಕೂಡಿದ್ದು ಕೆಲ ಭಾಗಗಳಲ್ಲಿ ರಸ್ತೆಯ ನಡುವೆಯೇ ನೀರು ನಿಲ್ಲುವಂತೆ ಆಗಿದೆ, ಇದರಿಂದ ರಸ್ತೆಯಲ್ಲಿ ಇಂಧನಗಳು ಸೋರಿಕೆ ಯಾಗುವ ಸಂಧರ್ಭದಲ್ಲಿ ಅಪಘಾತ ಗಳು ನಡೆಯಲಿವೆ ಇಂತಹ ಯಾವುದೇ ಅಹಿತಕರ ಘಟನೆಗಳು ನಡೆದರೆ ಕಾಮಗಾರಿ ಮಾಡುತ್ತಿರುವ ಇಂಜಿನಿಯರ್‌ಗಳೇ ನೇರ ಹೊಣೆ ಎಂದರು.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ದಲಿತಪರ ಸಂಘಟನೆಗಳು ಜ.3 ರಂದು ಸಭೆ ನಡೆಸಲಿದ್ದು ಸಭೆಯ ನಂತರ ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ರಸ್ತೆಯಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಹೆತ್ತೂರು ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net