ಶಿಬಿರದಲ್ಲಿ 75 ಯೂನಿಟ್ ರಕ್ತ ಸಂಗ್ರಹ

IMG-20240111-WA0178
ಶ್ರೀರಂಗಪಟ್ಟಣದ ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ದಾನಿಗಳು ರಕ್ತ ನೀಡಿದರು
Published on

ಶ್ರೀರಂಗಪಟ್ಟಣ: ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಮೈಸೂರು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 75 ಯೂನಿಟ್ ರಕ್ತ ಸಂಗ್ರಹವಾಯಿತು.

ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಡಾ.ಕೆ.ಎಸ್.ಅಭಿನಂದನ್ ಹಾಗೂ ಪ್ರೊ.ಎನ್.ನಕುಲ್ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿದರು.

ಮಂಡ್ಯದ ಮಿಮ್ಸ್ ರಕ್ತನಿಧಿ ಕೇಂದ್ರದ ವೈದ್ಯೆ ಡಾ.ಪ್ರಥಮ ಹಾಗೂ ನರ್ಸಿಂಗ್ ಅಧಿಕಾರಿಗಳಾದ ರಫಿ, ಸೋಮಣ್ಣ ನೇತೃತ್ವದಲ್ಲಿ ಸಿಬ್ಬಂದಿ ಸುರಕ್ಷಿತವಾಗಿ ರಕ್ತ ಪಡೆದು ಸಂರಕ್ಷಿಸಿದರು.

ಪಟ್ಟಣದ ಶಂಕರಲಾಲ್ ನೈನಾಲ್ ಟ್ರಸ್ಟ್ ವತಿಯಿಂದ ದಾನಿಗಳಿಗೆ ಸೇಬು ವಿತರಣೆ ಮಾಡಲಾಯಿತು. ಶಿಬಿರದಲ್ಲಿ ರಕ್ತ ಪ್ರಯೋಗ ಶಾಲೆ ತಂತ್ರಜ್ಞೆ ಭಾನುಮತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net