ಜಿನ್ನಹಳ್ಳಿ ಸಹಕಾರ ಸಂಘಕ್ಕೆ 75 ಸಾವಿರ ರೂ. ಲಾಭ

25HDK00005
ಎಚ್.ಡಿ.ಕೋಟೆ ತಾಲೂಕಿನ ಜಿನ್ನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯಲ್ಲಿ ರಾಜನಾಯಕ ಮಾತನಾಡಿದರು.
Published on

ಎಚ್.ಡಿ.ಕೋಟೆ: ಜಿನ್ನಹಳ್ಳಿ ಸಹಕಾರ ಸಂಘವು ಉತ್ತಮ ಸ್ಥಿತಿಯಲ್ಲಿದ್ದು, ಎಲ್ಲರ ಸಹಕಾರದಿಂದ ಈ ಸಾಲಿನಲ್ಲಿ 75 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ತಿಳಿಸಿದರು.

ತಾಲೂಕಿನ ಜಿನ್ನಹಳ್ಳಿ ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಉಪ ಕಸುಬಾಗಿದ್ದು ಕುಟುಂಬದ ನಿರ್ವಹಣೆಗೆ ಬಹಳ ಉಪಯುಕ್ತವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಇದರಲ್ಲಿ ತೊಡಗಿಸಿಕೊಳ್ಳಬೇಕು. ಕಳಪೆ ಹಾಲನ್ನು ತಂದು ಸಂಘದ ಹೆಸರನ್ನು ಕೆಡಿಸುವ ಬದಲು ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘದಲ್ಲಿ ಹಾಕುವುದರ ಮುಖಾಂತರ ಉತ್ತಮ ಬೆಲೆ ಪಡೆದುಕೊಳ್ಳಬಹುದು. ಗುಣಮಟ್ಟದ ಹಾಲು ನಿರ್ವಹಣೆಗೆ ಸಂಬಂಧಪಟ್ಟ ವೈದ್ಯರನ್ನು ಪ್ರತಿ 15 ದಿನಕ್ಕೊಮ್ಮೆ ಗ್ರಾಮಕ್ಕೆ ಭೇಟಿ ನೀಡುವಂತೆ ತಿಳಿಸುವುದಾಗಿ ಎಂದರು.

ನಮ್ಮ ಸಂಘವನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದು, ಸ್ವಂತ ಕಟ್ಟಡದ ಅವಶ್ಯಕತೆ ಇರುವುದರಿಂದ ಮುಂದಿನ ವಾರ್ಷಿಕ ಸಭೆಯ ಒಳಗೆ ಎಲ್ಲರ ಸಹಕಾರದಿಂದ ಆಡಳಿತ ಮಂಡಳಿಯು ಒಕ್ಕೂಟದ ಸಂಬಂಧಪಟ್ಟ ನಿರ್ದೇಶಕರು ಹಾಗೂ ಶಾಸಕರನ್ನು ಭೇಟಿ ಮಾಡಿ ಸರ್ಕಾರದ ಅನುದಾನವನ್ನು ತಂದು ಸ್ವಂತ ಕಟ್ಟಡ ಮಾಡುತ್ತೇವೆ ಎಂದು ತಿಳಿಸಿದರು.

ಸಂಘದ ಮೇಲ್ವಿಚಾರಕ ಯೋಗೇಶ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಮರಳೂರು ನಾಯಕ, ನಿರ್ದೇಶಕರಾದ ಸಿದ್ದನಾಯಕ, ಚಿಕ್ಕಣ್ಣ ನಾಯಕ, ರಾಜನಾಯಕ, ನಾಗರಾಜು, ಚಿಕ್ಕಣ್ಣ, ನಟರಾಜು, ಕಮಲಮ್ಮ, ಲಿಂಗರಾಜು, ಕೃಷ್ಣ, ನಾಗೇಂದ್ರ, ಕಾರ್ಯ ನಿರ್ವಹಣಾಧಿಕಾರಿಯದ ವಿಜಯ್ ಕುಮಾರ್, ಪವನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net