

ಹೊಳೆನರಸೀಪುರ : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನಲ್ಲಿ 75.83 ಲಕ್ಷ ರೂ. ಲಾಭ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಪದ್ಮರಾಜು ತಿಳಿಸಿದರು.
ನಮ್ಮ ಬ್ಯಾಂಕಿನಲ್ಲಿ 5148 ಷೇರುದಾರರಿದ್ದು, ಮಾರ್ಚ್ ಅಂತ್ಯಕ್ಕೆ 2.4 ಕೋಟಿ ರೂ.ಗೂ ಹೆಚ್ಚಿನ ಹಣವನ್ನು 171 ರೈತರಿಗೆ ಸಾಲವಾಗಿ ನೀಡಿದ್ದೇವೆ. ಜತೆಗೆ 43 ರೈತರಿಗೆ ವಿವಿಧ ಯೋಜನೆ ಅಡಿಯಲ್ಲಿ 56.66 ಲಕ್ಷ ರೂ. ಸಾಲ ನೀಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಮ್ಮ ಬ್ಯಾಂಕಿನಿಂದ 2024 ಮಾರ್ಚ್ 31 ಕ್ಕೆ ಒಟ್ಟು 3.5 ಕೋಟಿ ರೂ. ಸಾಲ ನೀಡಿದ್ದು, 2.5 ಕೋಟಿ ರೂ. ಸಾಲ ವಸೂಲಾಗಿದೆ. ಬ್ಯಾಂಕಿನಿಂದ ಸುಮಾರು 10 ಕೋಟಿ ರೂ. ಗಳವರೆಗೆ ವಾರ್ಷಿಕ ವಹಿವಾಟು ನಡೆದಿದೆ ಎಂದರು. ಉಪಾಧ್ಯಕ್ಷ ಎಚ್.ಕೆ. ಲಕ್ಷ್ಮಣ, ವ್ಯವಸ್ಥಾಪಕ ಚಂದ್ರಶೇಖರ್ ಇತರರು ಇದ್ದರು.