74 ಕೆರೆ ಭರ್ತಿ ಅಂತಿಮ ಹಂತದಲ್ಲಿ

18 KHP 01
ಗುಡೇಕೋಟೆ ಸಮೀಪದ ಗಂಡಬೊಮ್ಮನಹಳ್ಳಿ ಕೆರೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶಿಲಿಸಿದರು. ದ್ರಾಕ್ಷಿರಸ ನಿಗಮದ ಅಧ್ಯಕ್ಷ ಡಾ.ಯೊಗೀಶ ಬಾಬು, ಕೆಪಿಸಿಸಿ ಎಸ್ಟಿ ಮೋರ್ಚಾ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಎನ್.ಟಿ.ತಮ್ಮಣ್ಣ ಇತರರಿದ್ದರು.
Published on

ಕಾನಹೊಸಹಳ್ಳಿ: ಜಿಲ್ಲೆಯ ಗಂಡಬೊಮ್ಮನಹಳ್ಳಿ ಕೆರೆ ಮುಂಗಾರಿನ ಆರಂಭದಲ್ಲೇ ಭರ್ತಿಯಾಗಿರುವುದು ಸಂತಸದ ವಿಚಾರದ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಗಂಡಬೊಮ್ಮನಹಳ್ಳಿ ಕೆರೆಗೆ ಮಂಗಳವಾರ ಭೇಟಿ ನೀಡಿ ಕೆರೆ ಏರಿ ಅಭಿವೃದ್ಧಿ ಕಾಮಗಾರಿಯ ಮಹಿತಿ ಪಡೆದು ಮಾತನಾಡಿದರು. ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳವ ಹಂತದಲ್ಲಿದೆ. ಪ್ರಾಯೋಗಿಕವಾಗಿ ಕೆಲವು ಕೆರೆಗಳಿಗೆ ಈಗಾಗಲೇ ನೀರು ಬೀಡಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದ್ದಾರೆ. ಬಾಕಿ ಕಾಮಗಾರಿ ತ್ವರಿತವಾಗಿ ಮುಗಿಸಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದರು.

ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಗಂಡಬೊಮ್ಮನಹಳ್ಳಿ ಕೆರೆಯನ್ನು ಗುಡೇಕೋಟೆ ಪಾಳೇಗಾರ ಬೊಮ್ಮಂತರಾಜ ನಿರ್ಮಿಸಿದ್ದು, ಕೆರೆ ನಾಶವಾಗಿತ್ತು. ತರುವಾಯ ಮಾಜಿ ಸಚಿವ ಎಂ.ವೈ.ಘೋರ್ಪಡೆ ಮರು ನಿರ್ಮಿಸಿದ್ದರು.

ಈಗ ಕೆರೆಯ ಏರಿ ಮತ್ತು ಎಡ, ಬಲದಂಡೆ ಕಾಲುವೆಯನ್ನು 5.60 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರತ್ನಮ್ಮ ಹೊನ್ನಪ್ಪ, ಜಿಪಂ ಮಾಜಿ ಸದಸ್ಯರಾದ ನರಸಿಂಹನಗಿರಿ ವೆಂಕಟೇಶ, ಕೆ.ಎಂ.ಶಶಿಧರ್, ಹುಡೇಂ ಪಾಪನಾಯಕ, ಗಂಟೆ ಬಸವರಾಜ, ಮಾರಮ್ಮನಹಳ್ಳಿ ನಾಗರಾಜ, ಬೋರಯ್ಯ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕಾಕಿಬಸಣ್ಣ, ಪಿಡಿಒ ಮಂಜುನಾಥ, ನಡವಲಹಳ್ಳಿ ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net