

ಹಾವೇರಿ: ಜಿಲ್ಲೆಯಲ್ಲಿ ಬುಧವಾರ ಒಟ್ಟು 71 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. 150 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,513 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 825 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 31 ಜನರು ಮೃತಪಟ್ಟಿದ್ದು, 578 ಪ್ರಕರಣಗಳು ಸಕ್ರಿಯವಾಗಿವೆ.
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ರಸ್ತೆಯಲ್ಲಿ 3, ಶಿವಾಜಿನಗರದಲ್ಲಿ 5, ಜಿಲ್ಲಾಸ್ಪತ್ರೆ ವಸತಿಗೃಹದಲ್ಲಿ 3, ನಾಗೇಂದ್ರನಮಟ್ಟಿಯಲ್ಲಿ 2, ಲಕ್ಕಿಸೂಪರ್ ಮಾರ್ಕೆಟ್ ಬಳಿ, ವೈಭವಲಕ್ಷ್ಮಿ ಪಾರ್ಕ್, ಬಸವೇಶ್ವರ ನಗರ ಬಿ ಬ್ಲಾಕ್ 18ನೇ ಕ್ರಾಸ್, ಸುಭಾಸ ಸರ್ಕಲ್, ಯಾಲಕ್ಕಿ ಓಣಿ, ದ್ಯಾಮವ್ವನಗುಡಿ ಓಣಿಯಲ್ಲಿ ತಲಾ ಒಬ್ಬರಿಗೆ, ಕೋಳೂರ ಗ್ರಾಮ 2, ಅಗಡಿ, ಬೂದಗಟ್ಟಿ, ಗುಡೂರ, ಬೆಳವಿಗಿ, ಗುತ್ತಲ, ಹೊಸಕಿತ್ತೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 27 ಜನರಿಗೆ ಸೋಂಕು ತಗುಲಿದೆ.
ಸವಣೂರ ಪಟ್ಟಣದಲ್ಲಿ 4, ಹತ್ತಿಮತ್ತೂರ ಗ್ರಾಮದಲ್ಲಿ 5, ಕಾರಡಗಿ ಗ್ರಾಮದಲ್ಲಿ ಇಬ್ಬರು ಸೇರಿ 11 ಜನರಿಗೆ ಸೋಂಕು ದೃಢಪಟ್ಟಿದೆ.
ಶಿಗ್ಗಾಂವಿ ಪಟ್ಟಣದಲ್ಲಿ 6, ಗಂಗಿಬಾವಿ 2, ಬಂಕಾಪುರ 1, ಕಲ್ಯಾಣ ಗ್ರಾಮದಲ್ಲಿ ಒಬ್ಬರಿಗೆ ಸೇರಿ ಒಟ್ಟು 10 ಜನರಿಗೆ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರ ನಗರದಲ್ಲಿ 5, ವಡೆಯರಾಯನಹಳ್ಳಿ, ಚಳಗೇರಿ, ದೇವರಗುಡ್ಡ, ಕೊನಬೇವು ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 9 ಜನರಿಗೆ ಸೋಂಕು ತಗುಲಿದೆ.
ರಟ್ಟಿಹಳ್ಳಿಯಲ್ಲಿ 2, ಶಿರಗಂಬಿ, ಮೇದೂರ, ಹಂಸಬಾವಿಯಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 5 ಜನರಿಗೆ ಸೋಂಕು ದೃಢಪಟ್ಟಿದೆ.
ಹಾನಗಲ್ಲ ತಾಲೂಕು ಅಕ್ಕಿಆಲೂರ, ಶ್ಯಾಡಗುಪ್ಪಿ, ಇನಾಮದ್ಯಾಮನಕೊಪ್ಪ, ಉಪ್ಪುಣಸಿ, ಹುಲ್ಲತ್ತಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 5 ಜನರಿಗೆ ಸೋಂಕು ತಗುಲಿದೆ.
ಬ್ಯಾಡಗಿ ಪಟ್ಟಣದ ಬೆಟ್ಟದಮಲ್ಲೇಶ್ವರ ನಗರ, ಬುಡಪನಹಳ್ಳಿ, ಬಿಸಲಹಳ್ಳಿ, ಕಾಗಿನೆಲೆಯಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 4 ಜನರಿಗೆ ಸೋಂಕು ಖಚಿತವಾಗಿದೆ.
ಇಬ್ಬರ ಸಾವು
ಹಾವೇರಿ ತಾಲೂಕು ಹಾವನೂರ ಗ್ರಾಮದ 40 ವರ್ಷದ ಪುರುಷ ಆ. 1ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ. 3ರಂದು ಮೃತಪಟ್ಟಿದ್ದಾರೆ. ರಟ್ಟಿಹಳ್ಳಿ ತಾಲೂಕು ಟಿಪ್ಪುನಗರದ 70 ವರ್ಷದ ವೃದ್ಧ ಆ. 2ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಜಿಲ್ಲಾಸ್ಪತ್ರೆ ದಾಖಲಾಗಿದ್ದರು. ಆ. 4ರಂದು ಮೃತಪಟ್ಟಿದ್ದಾರೆ.
EndFragment