೭೦ನೇ ಭಾರತೀಯ ಗ್ರಂಥಾಲಯ ಸಂಘದ ಅಂತರಾಷ್ಟಿçÃಯ ಸಮ್ಮೇಳನ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಗ್ರಂಥಾಲಯಗಳು ಅತಿಮುಖ್ಯ- ಪ್ರೋ.ಬಟ್ಟು ಸತ್ಯನಾರಾಯಣ

AGRI VV
AGRI VV
Published on

ರಾಯಚೂರು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಗ್ರಂಥಾಲಯಗಳು ಅತಿಮುಖ್ಯವಾಗಿರುತ್ತವೆ. ಹಿಂದೆ ಗ್ರಂಥಾಲಯಗಳಲ್ಲಿ ಕೇವಲ ಪುಸ್ತಕಗಳು ಮಾತ್ರ ಇರುತ್ತಿದ್ದವು. ಆದರೆ ಪ್ರಸ್ತುತ ಗ್ರಂಥಾಲಯಗಳಲ್ಲಿ ಆಧುನಿಕತೆಯನ್ನು ಸೇರಿಸ ಇಂಟರ್‌ನೆಟ್ ಸೌಲಭ್ಯ, ಆನ್ಲೆÊನ್ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಗಳನ್ನು ಕಾಣಬಹುದಾಗಿದೆಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಯಚೂರು ಕೃಷಿ ವಿವಿ, ಭಾರತೀಯ ಗ್ರಂಥಾಲಯ ಸಂಘ ನವದೆಹಲಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ೭೦ನೇ ಭಾರತೀಯ ಗ್ರಂಥಾಲಯ ಸಂಘದ ಅಂತರಾಷ್ಟಿçÃಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಂಥಾಲಯಗಳು ಮತ್ತು ಕೃತಕ ಬುದ್ದಿಮತ್ತೆ, ಸುಸ್ಥಿರ ಜ್ಞಾನ ವ್ಯವಸ್ಥೆಗಾಗಿ ಬಳಕೆದಾರರನ್ನು ಸಬಲೀಕರಣಗೊಳಿಸುವುದು ಎಂಬ ವಿಷಯದಡಿ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಗ್ರಂಥಾಲಯಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮತ್ತು ಗ್ರಂಥಾಲಯಗಳಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಚರ್ಚೆಗಳಾಬೇಕಿದೆ. ಗ್ರಂಥಾಲಯಗಳು ಜ್ಞಾನದ ಖಜಾನೆಗಳಿದ್ದಂತೆ, ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳು ಹಾಗೂ ಇಡೀ ರಾಷ್ಟç ಅಭಿವೃದ್ಧಿ ಹೊಂದಲು ಗ್ರಂಥಾಲಯಗಳ ಪಾತ್ರ ಬಹುಮುಖ್ಯವಾಗಿರುತ್ತದೆ.

ಪ್ರಸ್ತುತ ಗ್ರಂಥಾಲಯಗಳಲ್ಲಿ ಆಧುನಿಕತೆಯನ್ನು ಸೇರಿಸ ಇಂಟರ್‌ನೆಟ್ ಸೌಲಭ್ಯ, ಆನ್ಲೆÊನ್ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಗಳನ್ನು ಕಾಣಬಹುದಾಗಿದೆ. ಭಾರತ ಸರ್ಕಾರವು ಎಲ್ಲಾ ಗ್ರಂಥಾಲಗಳಲ್ಲಿ ಆನ್ಲೆÊನ್ ನಿಯತಕಾಲಿಕೆಗಳನ್ನು ಕೂಡ ಒದಗಿಸುತ್ತಿದ್ದು, ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದರು.

೨೦೪೭ರಲ್ಲಿ ಅಭಿವೃದ್ಧಿ ಹೊಂದಿದ ವಿಕಸಿತ ಭಾರತವನ್ನು ಕಾಣಬಹಬುದಾಗಿದ್ದು, ರಾಷ್ಟçದ ಅಭಿವೃದ್ಧಿಗೆ ಗ್ರಂಥಪಾಲಕರ

ಪಾತ್ರವೂ ಅತ್ಯಂತ ಮುಖ್ಯವಾಗಿರುತ್ತದೆ ಎಂದರು. ಇದಲ್ಲದೇ ಪ್ರತಿಯೊಬ್ಬರಿಗೂ ಕೌಶಲ್ಯಾಭಿವೃದ್ಧಿ ಅತ್ಯಂತ

ಮುಖ್ಯವಾಗಿದ್ದು, ಅದನ್ನೂ ಕೂಡ ಗ್ರಂಥಾಲಯಗಳಲ್ಲಿ ಅಳವಡಿಸಲು ಯೋಜಿಸಲಾಗುತ್ತಿದೆ. ಗ್ರಂಥಾಲಯಗಳನ್ನು

ಸಮಯಾನುಸಾರ ತೆರೆಯದೆ ನಿರಂತರವಾಗಿ ತೆರೆದಿಡುವ ವ್ಯವಸ್ಥೆ ಆಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿಯ ಕುಲಪತಿ ಡಾ.,ಎಂ.ಹನುಮAತಪ್ಪ ಮಾತನಾಡಿ,

ಗ್ರಂಥಾಲಯಗಳಿAದ ಜ್ಞಾನವನ್ನು ಸಂಪಾದಿಸಬಹುದಾಗಿದೆ. ಗ್ರಂಥಾಲಯಗಳ ಮೂಲಕ ಸುಸ್ಥಿರ ಜ್ಞಾನ ವ್ಯವಸ್ಥೆಗಾಗಿ

ಬಳಕೆದಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಅನುಕೂಲವಾಗಲಿದೆ.  ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾವಿವಿ ಹಂಗಾಮಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ, ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಮೋಹನ ಖೇರ್ಡೆ, ಪ್ರಧಾನ ಕಾರ್ಯದರ್ಶಿ ಡಾ.ಒ.ಎನ್.ಚೌಬೆ, ರಾಜೀವ್ ಗಾಂಽ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಎಚ್.ಎಸ್.ಸಿದ್ದಮಲ್ಲಯ್ಯ, ಗುಲ್ಬರ್ಗ ವಿಶ್ವ ವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ ಜಂಗೆ, ವಿವಿಯ ವ್ಯವ್ಯಸ್ಥಾಪನಾ ಮಂಡಳಿ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಮಲ್ಲಿಕಾರ್ಜುನ.ಡಿ, ಮಲ್ಲೇಶ ಕೊಲಿಮಿ, ಡಾ.ಗುರುರಾಜ ಸುಂಕದ, ಸಂಘಟಕ ಕಾರ್ಯದರ್ಶಿ ಡಾ.ಮಚೇಂದ್ರನಾಥ.ಎಸ್, ಸಹ ಸಂಘಟಕ ಕಾರ್ಯದರ್ಶಿ ಡಾ.ಪಿಎಸ್.ಕಟ್ಟಿಮನಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net