

ನಿಪ್ಪಾಣಿ: ಪ್ರಸಕ್ತ ಸಾಲಿನಲ್ಲಿ 700 ಕೋಟಿ ರೂ. ಠೇವು ಸಂಗ್ರಹ ಹಾಗೂ 50 ಶಾಖೆ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥಾಪಕ ಅಧ್ಯ ಡಾ.ಚಂದ್ರಕಾಂತ ಕುರಬೆಟ್ಟಿ ಹೇಳಿದರು.
ನಗರದ ವೆಂಕಟೇಶ್ವರ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 33ನೇ ವಾರ್ಷಿಕ ಸಭೆಯ ಅಧ್ಯತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಅನೇಕ ಸಮಾಜೋಪಯೋಗಿ ಯೋಜನೆ ಹಮ್ಮಿಕೊಂಡಿದೆ. ಪಾರದರ್ಶಕ ಮತ್ತು ರಾಜಕೀಯರಹಿತ ವ್ಯವಹಾರದಿಂದ ಪ್ರಗತಿ ಸಾಗಿಸುತ್ತಿದೆ ಎಂದರು.
ಹಿರಿಯ ಸಂಚಾಲಕ ಡಾ.ಶಂಕರಗೌಡ ಪಾಟೀಲ ಮಾತನಾಡಿ, 2022&23ನೇ ಸಾಲಿನಲ್ಲಿ 425 ಕೋಟಿ ರೂ. ಠೇವು ಸಂಗ್ರಹಿಸಿ 319 ಕೋಟಿ ರೂ. ಸಾಲ ವಿತರಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 8.31 ಕೋಟಿ ರೂ. ಲಾಭ ಗಳಿಸಿದೆ. ಎಲ್ಲ ಶಾಖೆಗಳನ್ನು ಗಣಕೀಕರಣಗೊಳಿಸಿ, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುವುದು ಎಂದರು.
ಶೇ.100 ಬಡ್ಡಿ ವಸೂಲು ಮಾಡಿದ ಶಾಖೆಗಳಿಗೆ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿರೂಪಾಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಇಒ ಶಶಿಕಾಂತ ಆದನ್ನವರ, ಸಂಚಾಲಕರಾದ ಸುರೇಶ ಶೆಟ್ಟಿ, ಶ್ರೀಕಾಂತ ಪರಮನೆ, ದಿನೇಶ ಪಾಟೀಲ, ಸಹಕಾರಿಯ ಸಹಾಯಕ ಸಿಇಒ ಸೂರಜ ೂಡ್ಕೆ, ಸಂಚಾಲಕ ಕಿಶೋರ ಬಾಳಿ, ಪ್ರತಾಪ ಪಟ್ಟಣಶೆಟ್ಟಿ, ವ್ಯವಸ್ಥಾಪಕ ರಾಜೇಂದ್ರ ಮಗದುಮ್ಮ, ಮಹೇಶ ಬಾಗೇವಾಡಿ, ಸದಾನಂದ ಧುಮಾಲೆ, ಅಶೋಕ ಲಿಗಾಡೆ, ಪ್ರತಾಪ ಮೇತ್ರಾಣಿ, ಸದಾಶಿವ ಧನಗರ, ಪುಷ್ಪಾ ಕುರಬೆಟ್ಟಿ, ವಿಜಯಾ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಸಹಾಯಕ ಸಿಇಒ ವಿದ್ಯಾ ಕಮತೆ, ಭದ್ರೇಶ ುಟಾಣೆ, ಮಹೇಶ ಶೆಟ್ಟಿ ಇತರರಿದ್ದರು.