70 ವರ್ಷದಿಂದ ಕಾಂಗ್ರೆಸ್ ಆಸ್ತಿ ಉದ್ದಾರ

M Mahesh
Published on

ಕಲಬುರಗಿ: ೭೦ ವರ್ಷದಿಂದ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ತನ್ನ ಆಸ್ತಿ ಹೆಚ್ಚಿಸಿಕೊಂಡಿದೆ ಹೊರತು, ದೇಶದ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಮಹೇಶ ತಿಳಿಸಿದರು.
ನೆಹರೂ ಕಾಲದಿಂದಲೂ ಮುಸ್ಲಿಂರ ಓಲೈಕೆ ಮಾಡುವ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಇಂದಿಗೂ ಅದನ್ನೇ ಮುಂದುವರಿಸುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೆಹರು ದೇಶವನ್ನು ಒಡೆದು ಆಳಿದ್ದು, ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ ದೇಶ ಇಬ್ಬಾಗದ ಮಾತನಾಡುತ್ತಿದ್ದಾರೆ. ನೆಹರು ತಪ್ಪು ನಿರ್ಧಾರದಿಂದ ದೇಶ ಇಂದಿಗೂ ಬೆಲೆ ತೆರುತ್ತಿದೆ. ನೆಹರು ಸನಾತನ ಧರ್ಮ ನಿರ್ಲಕ್ಷಿಸಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ ನೀಡುವುದು ಆಗಿತ್ತು ಎಂದರು.
ಬಿಜೆಪಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಲಿದೆ ಎಂಬುದು ಶುದ್ಧ ಸುಳ್ಳು. ಸ್ವತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಖುದ್ದು ಡಾ.ಬಿ.ಆರ್.ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಮೋದಿ ಉಚ್ಛರಿಸಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟದ ೧೭ ಪಕ್ಷಗಳಲ್ಲಿದ್ದು, ಕಾಂಗ್ರೆಸ್‌ಗೆ ೫೦ ಸ್ಥಾನಗಳು ಬರುವುದಿಲ್ಲ. ದೇಶದ ಸುರಕ್ಷತೆಗೆ ಮೋದಿಯೇ ನಿಶ್ಚಿತ ಎಂದು ಜನ ದೃಢ ಸಂಕಲ್ಪ ಮಾಡಿದ್ದಾರೆ ಎಂದರು.
ಬಿಜೆಪಿ ಮಾಧ್ಯಮ ಸಮಿತಿ ರಾಜ್ಯ ಸದಸ್ಯ ವೆಂಕಟಪ್ರಸಾದ್ ಮಾಲೇಪಾಟಿ, ಸುಧಾ ಹಾಲಕಾಯಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಧೀರ ಉಪಾಧ್ಯಾಯ, ನಾಗರಾಜ ಮಹಾಗಾಂವಕರ್, ಅಣವೀರ ಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net