ಕಳಸ ತಾಲೂಕಿನಲ್ಲಿ 70 ಮಂದಿ ಗೃಹ ಮತದಾನ

16kls2 (1)
ಕಳಸ ತಾಲೂಕು ದೇವರಗುಡ್ಡದಲ್ಲಿ ಮತ ಚಲಾಯಿಸಿದ ಹಿರಿಯರು ನಂತರ ಅಧಿಕಾರಿಗಳ ಜತೆ ನಿಂತಿರುವುದು.
Published on

ಕಳಸ: ಚುನಾವಣಾ ಆಯೋಗದ ಸೂಚನೆಯಂತೆ ನೋಂದಣಿ ಮಾಡಿಕೊಂಡ 85 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅಂಗವಿಕಲರ ಗೃಹ ಮತದಾನ ತಾಲೂಕಿನಾದ್ಯಂತ ನಡೆಯಿತು. ತಾಲೂಕಿನ ಕಳಸ, ಹೊರನಾಡು, ತೋಟದೂರು, ಇಡಕಣಿ, ಸಂಸೆ, ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿ 70 ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಿದರು.
60 ಹಿರಿಯ ನಾಗರಿಕರು ಹಾಗೂ 13 ಅಂಗವಿಕಲರು ಸೇರಿದಂತೆ ತಾಲೂಕಿನಲ್ಲಿ ಒಟ್ಟು 73 ಮಂದಿ ಗೃಹ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದರು. ಎರಡು ದಿನ ನಡೆದ ಗೃಹ ಮತದಾನ ಪ್ರಕ್ರಿಯೆಯಲ್ಲಿ 70 ಮಂದಿ ಮತ ಚಲಾಯಿಸಿದರು. ನೋಂದಿತರಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ವಿವಿಧ ಕಾರಣಗಳಿಂದ ಮತ ಚಲಾಯಿಸಲಿಲ್ಲ.
ತಾಲೂಕಿನಲ್ಲಿ ಐದು ತಂಡಗಳು ಕರ್ತವ್ಯ ನಿರ್ವಹಿಸಿದವು. ಒಂದೊಂದು ತಂಡದಲ್ಲಿ ಪಿಆರ್‌ಒ, ಪಿಒ, ಸಂಬಂಧಪಟ್ಟ ಬಿಎಲ್‌ಒ, ಸೆಕ್ಟರ್ ಆಫೀಸರ್, ಡಿ.ಗ್ರೂಪ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net