

ಹುಬ್ಬಳ್ಳಿ: ಮನೆಯಲ್ಲಿದ್ದವರನ್ನು ಬೆದರಿಸಿ, ಕೈಕಾಲು ಕಟ್ಟಿಹಾಕಿ 70 ಲಕ್ಷ ರೂ. ಮೌಲ್ಯ ಚಿನ್ನಾಭರಣ ಹಾಗೂ ನಗದು ಕಳುವಾದ ಘಟನೆ ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ರಜನೀಕಾಂತ ದೊಡ್ಡಮನಿ ಎಂಬುವವರ ಮನೆಯಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಹಣವನ್ನು ಕಳ್ಳರು ದೊಚಿಕೊಂಡು ಪರಾರಿಯಾಗಿದ್ದಾರೆ. ರಜನೀಕಾಂತ ಅವರ ಮನೆಯ ಕಬ್ಬಿಣದ ಡ್ರಿಲ್ ಕಟ್ ಮಾಡಿ, ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದವರನ್ನು ಬೆದರಿಸಿದ್ದಷ್ಟೇ ಅಲ್ಲದೇ ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯಲ್ಲಿದ್ದ 45 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 25 ಸಾವಿರ ರೂ. ನಗದು ಸೇರಿ ಒಟ್ಟು 70 ಲಕ್ಷ ರೂ. ಕಳ್ಳತನ ಮಾಡಿದ್ದಾರೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ತಿಳಿಸಿದ್ದಾರೆ.
ಕೈಚಳಕ: ಗಣೇಶ ಹಬ್ಬದ ಬಂದೋಬಸ್ತ್ನಲ್ಲಿ ಪೊಲೀಸರು ಕಾರ್ಯ ನಿರತರಾಗಿದ್ದು, ಇದೇ ಸಮಯ ನೋಡಿಕೊಂಡು ಕಳ್ಳರು ಕೈ ಚಳಕ ತೋರಿದ್ದಾರೆ ಎನ್ನಲಾಗುತ್ತಿದೆ.