7 ಲಕ್ಷ ಮೌಲ್ಯದ ಗಾಂಜಾ ನಾಶ

dd
Published on

ಗದಗ:
ಜಿಲ್ಲೆಯಾದ್ಯಂತ 2018ರಿಂದ 2021ರ ಅವಧಿಯಲ್ಲಿ ವಶಪಡಿಸಿಕೊಂಡ 7 ಲಕ್ಷ ಮೌಲ್ಯದ ಗಾಂಜಾವನ್ನು ಗುರುವಾರ ಅಬಕಾರಿ ಮತ್ತು ಪೊಲೀಸರ ಸಮಕ್ಷಮದಲ್ಲಿ ನಾಶಪಡಿಸಲಾಯಿತು. ನಾಲ್ಕು ವರ್ಷದ ಅವಧಿಯಲ್ಲಿ 16 ಪ್ರಕರಣಗಳನ್ನು ದಾಖಲಿಸಿ 35 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಜಮೀನು ಗಳಲ್ಲಿ ಬೆಳೆದ ಮತ್ತು ಅಕ್ರಮ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಎನ್​ಡಿಪಿಎಸ್​ ಕಾಯಿದೆ ಅಡಿಯಲ್ಲಿ ಗಾಂಜಾ ನಾಶಪಡಿಸಲಾಗಿದೆ ಎಂದು ಬಾಗಲಕೋಟೆ ವಿಭಾಗದ ಜಂಟಿ ನಿದೇರ್ಶಕ(ಗಾಂಜಾ ವಿಸರ್ಜನೆ ವಿಭಾಗ) ಬಾಲಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net