7 ತಾಸು ನಿರಂತರ ವಿದ್ಯುತ್ ಕೊಡಿ

18ydg06
Published on


ಯಾದಗಿರಿ: ಕೃಷಿ ಪಂಪ್ಸೆಟ್ಗಳಿಗೆ ನಿರಂತರ ಏಳು ತಾಸು ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ರೈತರು ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಕಣೇಕಲ್, ಕಡೇಚೂರು, ಬಾಡಿಯಾಲ, ಬಾಲಚೇಡ, ಸಂಬರ್, ಬದ್ದೇಪಲ್ಲಿ ಸೇರಿ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿತ್ತನೆ ಮಾಡಿದ ತೋಟಗಾರಿಕೆ ಬೆಳೆಗಳು, ವಿವಿದ ತರಕಾರಿಗಳು, ಸೇರಿದಂತೆ ವಾಣಿಜ್ಯ ಬೆಳೆಗಳು ಮಳೆ ಬಾರದೆ ಒಣಗುತ್ತಿದ್ದು ವಿದ್ಯುತ್ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿ ಕಾರಿದರು. ಅಹವಾಲು ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಅಧಿಕಾರಿಗಳು ರೈತರ ಮನವೊಲಿಕೆ ಪ್ರಯತ್ನಿಸಿದರು. ಆದರೆ ರೈತರು ಬಗ್ಗಲಿಲ್ಲ ಇದರ ಸೂಕ್ಷ್ಮತೆ ಅರಿತ ಜೆಸ್ಕಾಂನ ಕಾರ್ಯನಿವರ್ಾಹಕ ಎಂಜಿನಿಯರ್ ಡಿ.ರಾಘವೇಂದ್ರ ಆಗಮಿಸಿ ರೈತರನ್ನು ಸಮಧಾನಪಡಿಸಿ ಮನವಿ ಸ್ವೀಕರಿಸಿದರು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದರ ಜತೆಗೆ ಮುಂದಿನ ದಿನಗಳಲ್ಲಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net