7 ಜನರಿಗೆ ಕೃತಕ ಕಾಲು ಜೋಡಣೆ

IMG-20230805-WA0123
Published on

ಸುಂಟಿಕೊಪ್ಪ: ಸ್ವಸ್ಥ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಶನಿವಾರ 7 ಅಂಗವಿಕಲರಿಗೆ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಯಿತು. ಕೂರ್ಗ್ ಫೌಂಡೇಷನ್ ನೇತೃತ್ವದ ಸ್ವಸ್ಥ ಸಂಸ್ಥೆ, ಕೊಯಮತ್ತೂರು ಮತ್ತು ಕುಶಾಲನಗರ ರೋಟರಿ ಘಟಕಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ತಜ್ಞರು ತಪಾಸಣೆ ನಡೆಸಿ ಕೃತಕ ಕಾಲು ಜೋಡಣೆ ಮಾಡಿದರು.

ಕೂರ್ಗ್ ಫೌಂಡೇಷನ್ ಹಾಗೂ ಸ್ವಸ್ಥ ಕೇಂದ್ರದ ಪ್ರಮುಖರಾದ ಆರತಿ ಸೋಮಯ್ಯ, ಗಂಗಾ ಚಂಗಪ್ಪ, ಕುಶಾಲನಗರ ರೋಟರಿ ಅಧ್ಯಕ್ಷೆ ಸುನಿತಾ ಮಹೇಶ್, ಕಾರ್ಯದರ್ಶಿ ಶರ್ಲಿ ಸಂತೋಷ್, ರೋಟರಿ ಪದಾಧಿಕಾರಿಗಳಾದ ಸತೀಶ್, ಎ.ಎ.ಚೆಂಗಪ್ಪ, ಶೋಭಾ ಸತೀಶ್, ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದ ಸಂಯೋಜಕರಾದ ಮುರುಗೇಶ್ ಇತರರು ಇದ್ದರು.

ಸುಂಟಿಕೊಪ್ಪ ಸ್ವಸ್ಥ ಕೇಂದ್ರದಲ್ಲಿ ಶನಿವಾರ ಅಂಗವಿಕಲರಿಗೆ ಆಯೋಜಿಸಿದ್ದ ಕೃತಕ ಕಾಲು ಜೋಡಣೆ ಶಿಬಿರದಲ್ಲಿ ಕುಶಾಲನಗರದ ರೋಟರಿ ಅಧ್ಯಕ್ಷೆ ಸುನಿತಾ ಮಹೇಶ್, ಕಾರ್ಯದರ್ಶಿ ಶರ್ಲಿ ಸಂತೋಷ್, ಪದಾಧಿಕಾರಿಗಳಾದ ಸತೀಶ್, ಎ. ಎ. ಚೆಂಗಪ್ಪ, ಶೋಭಾ ಸತೀಶ್, ಆರತಿ ಸೋಮಯ್ಯ, ಗಂಗಾ ಚಂಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net