

ಶಿಗ್ಗಾಂವಿ: ಮನೆ ಮುಂದೆ ಆಟ ಆಡುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಶನಿವಾರ ತಾಲೂಕಿನ ಹುಲಗೂರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳವಲಕೊಪ್ಪದಲ್ಲಿ ನಡೆದಿದೆ.
ಹುಲಗೂರ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗೂರ ಗ್ರಾಮದಲ್ಲಿ ಶನಿವಾರ 7 ವರ್ಷದ ಬಾಲಕಿ ಆಟವಾಡುತ್ತಿದ್ದಾಗ ಅದೇ ಗ್ರಾಮದ ಮರ್ದಾನ ಪಟೇಲ ಎಂಬ ವ್ಯಕ್ತಿ ಮಾವಿನ ಹಣ್ಣಿನ ಆಸೆ ತೋರಿಸಿ ಬಸವಣ್ಣನ ದೇವಸ್ಥಾನವೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.
ವಿಷಯ ತಿಳಿದ ಸಂತ್ರಸ್ತೆಯ ಪಾಲಕರು ಹುಲಗೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮರ್ದಾನ ಪಟೇಲ್ನನ್ನು ಬಂಧಿಸಿದ್ದಾರೆ.