

ಕಡೂರು: ಯಗಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಏಳು ಕುರಿಗಳು ಮತ್ತು ಎರಡು ಆಡುಗಳು ಬಲಿಯಾಗಿವೆ.
ಬುಧವಾರ ತಡ ರಾತ್ರಿ ಚಿರತೆ ಯಗಟಿಯ ಕೆಂಚಪ್ಪ ಮತ್ತು ರಾಜಪ್ಪ ಎಂಬುವವರ ಕೊಟ್ಟಿಗೆಗೆ ನುಗ್ಗಿ ಕುರಿಗಳ ಮೇಲೆ ದಾಳಿ ನಡೆಸಿ ಸಾಯಿಸಿದೆ. ಗುರುವಾರ ಉಪ ವಲಯ ಅರಣ್ಯಾಧಿಕಾರಿ ಅಮೃತಾ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಷ್ಟದ ಕುರಿತು ಇಲಾಖೆಗೆ ವರದಿ ಕಳಿಸಲಾಗಿದೆ. ಚಿರತೆ ಓಡಾಡುತ್ತಿರುವ ಮಾಹಿತಿ ಮೇರೆಗೆ ಕುಕ್ಕಸಮುದ್ರ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಯಗಟಿ ಬಳಿಯೂ ಬೋನು ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಜಾಕ್ ನದಾಫ್ ತಿಳಿಸಿದ್ದಾರೆ.