

ಕಾರವಾರ: ಅಂಕೋಲಾದ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಒಂದೇ ಕುಟುಂಬದ ಐವರು ಸೇರಿ ಏಳು ಜನ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಹೆದ್ದಾರಿ ಪಕ್ಕದ ಡಾಬಾದಲ್ಲಿದ್ದ ಲಕ್ಷ್ಮಣ ನಾಯ್ಕ(47 ), ಶಾಂತಿ ನಾಯ್ಕ(36), ರೋಶನ್ ನಾಯ್ಕ(11), ಅವಂತಿಕಾ (6), ಜಗನ್ನಾಥ (55) ಮಣ್ಣಿನಡಿ ಸಿಲುಕಿದ್ದಾರೆ. ಟ್ಯಾಂಕರ್ ಹಾಗೂ ಅದರಲ್ಲಿದ್ದ ಕ್ಲೀನರ್ ಕೂಡ ಸಿಲುಕಿದ್ದು, ಅವರ ಹೆಸರು ತಿಳಿದು ಬರಬೇಕಿದೆ.