

ರಟ್ಟಿಹಳ್ಳಿ: ಪಟ್ಟಣದ ರಾಣೆಬೆನ್ನೂರ ರಸ್ತೆಯ ದೊಡ್ಡಗುಬ್ಬಿ ಗ್ರಾಮದ ಬಳಿ ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 7 ಜನರಿಗೆ ಗಂಭೀರ ಗಾಯವಾದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಅಪಘಾತದಲ್ಲಿ ವಾಹನ ಚಾಲಕ ರವಿತೇಜ ಶಿವಕುಮಾರ ಪುಟ್ಟಣ್ಣನವರ, ಚೇತನ ಎತ್ತಿನಹಳ್ಳಿ, ರತ್ನವ್ವ ಶಂಕ್ರಪ್ಪ ಮಾಳಗಿ, ಸುದೀಪ ಮಾಳಗಿ, ಶೃತಿ ಶಂಕ್ರಪ್ಪ ಮಾಳಗಿ ಇವರಿಗೆ ಗಂಭೀರವಾಗಿ ಗಾಯಗಳಾಗಿವೆ. ರತ್ನವ್ವ ಮಾಳಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವೀರಯ್ಯ ಗದಿಗಯ್ಯ ಮಠದ ಮತ್ತು ಮಂಜು ಶಂಕ್ರಪ್ಪ ಮಾಳಗಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರಟ್ಟಿಹಳ್ಳಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ದೊಡ್ಡಗುಬ್ಬಿ ಗ್ರಾಮದ ಇವರು ಜು. 13ರಂದು ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಬರುವ ಸಂದಂರ್ಭದಲ್ಲಿ ಗ್ರಾಮದ ಬಳಿಯೇ ಇರುವ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.