ಕೃಷಿ ಪತ್ತಿನ ಸಹಕಾರ ಸಂಘಕ್ಕೆ 7 ಜನ ಅವಿರೋಧ ಆಯ್ಕೆ

7 RPT 1
ರಿಪ್ಪನ್‌ಪೇಟೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ಸದಸ್ಯರಿಗೆ ಚುನಾವಣಾಽಕಾರಿ ಹುಚ್ಚರಾಯಪ್ಪ ಘೋಷಣಾ ಪತ್ರ ನೀಡಿದರು. ಎಂ.ಎA.ಪರಮೇಶ್, ಎನ್.ಪಿ.ರಾಜು, ಜಯಂತಿ, ಶಾಲಿನಿ, ಬೋರಪ್ಪ ಇತರರಿದ್ದರು.
Published on

ರಿಪ್ಪನ್‌ಪೇಟೆ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಎಂ.ಎA. ಪರಮೇಶ, ಎನ್.ಪಿ.ರಾಜು, ಬಿ.ಟಿ.ವಿಶ್ವನಾಥ, ಜಿ.ಎಲ್.ಸೋಮಶೇಖರ, ತಿಮ್ಮನಾಯ್ಕ್ ಸಾಲಗಾರರ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಒಟ್ಟು 12 ಕ್ಷೇತ್ರದ ಪೈಕಿ 7 ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿ 5 ಸ್ಥಾನಕ್ಕೆ ಚುನಾವಣೆ ನಡೆಯಿತು. ಹಾಲಿ ಸಂಘದ ಅಧ್ಯಕ್ಷ ಎಂ.ಎA.ಪರಮೇಶ ನೇತೃತ್ವದ ತಂಡ ಎಲ್ಲ ಸ್ಥಾನಗಳಲ್ಲಿ ಜಯಗಳಿಸಿದೆ. ಭೈರಪ್ಪ, ಕೆ.ಬಿ.ಭದ್ರಪ್ಪ, ಗಣೇಶ್ ರಾವ್, ಬೋರಪ್ಪ, ಆಶಿಕ್, ಜಯಂತಿ, ಶಾಲಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪತಹಸೀÃಲ್ದಾರ್ ಹುಚ್ಚರಾಯಪ್ಪ ಚುನಾವಣಾ ಅಽಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net