ಕೃಷಿ ಸಹಕಾರ ಸಂಘಕ್ಕೆ 7 ಮಂದಿ ಅವಿರೋಧ ಆಯ್ಕೆ

3-3
Published on

ಬಾಕಿ 7 ನಿರ್ದೇಶಕರ ಸ್ಥಾನಗಳಿಗೆ 17 ಅಭ್ಯರ್ಥಿಗಳ ಸ್ಪರ್ಧೆ- ನ್ಯಾಯಾಲಯ ಆದೇಶದ ಬಳಿಕ ಲಿತಾಂಶ

ನೆಲಮಂಗಲ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಕ್ಕೆ 7 ಮಂದಿ ಅವಿರೋಧ ಆಯ್ಕೆಯಾದರೇ ಬಾಕಿ 7 ಸ್ಥಾನಗಳಿಗೆ ಚುನಾವಣೆಯಾಗಿದ್ದು, ನ್ಯಾಯಾಲಯದ ಆದೇಶದ ಬಳಿಕ ಲಿತಾಂಶ ಹೊರಬೀಳಲಿದೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮತದ ಆಡಳಿತ ಮಂಡಳಿಯ 7 ನಿರ್ದೇಶಕರ ಸ್ಥಾನದಲ್ಲಿ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5 ಮಂದಿ ನೂತನ ನಿರ್ದೇಶಕರಾಗಿ ಆಯ್ಕೆಯಾದರೆ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಶ್ರೀನಿವಾಸಪುರದ ಕಾಂಗ್ರೆಸ್ ಅಭ್ಯರ್ಥಿ ಹರೀಶ ಹಾಗೂ ಸಾಲಗಾರರ ಸಾಮಾನ್ಯ ತ್ಯಾಮಗೊಂಡ್ಲು ಕ್ಷೇತ್ರದ ಗುರುಪ್ರಕಾಶ ಅವರ ನಿರ್ದೇಶಕ ಸ್ಥಾನ ಸೇರಿದಂತೆ ಚುನಾವಣೆ ಎದುರಿಸಿದ್ದ

ಒಟ್ಟು ಏಳು ಮಂದಿಯ ಲಿತಾಂಶವು ನ್ಯಾಯಾಲಯದ ಅದೇಶದ ಬಳಿಕ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ನಾಗರಾಜು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಮಂಜುಳಾ ಸುರೇಶ್, ಮಾಜಿ ಅಧ್ಯಕ್ಷೆ ರಾಜಮ್ಮ ಪ್ರಕಾಶ್, ವಕೀಲ ಸುರೇಶ್, ಮುಖಂಡ ದೊಡ್ಡಕರೇನಹಳ್ಳಿ ಕುಮಾರ್, ವಿಜಯ್‌ಕುಮಾರ್ ಅಂಜನಮೂರ್ತಿ, ಬಿ.ಎಂ.ರವಿಕುಮಾರ್, ಮುರುಳೀಧರ್, ನಾಗರಾಜು ಇದ್ದರು.

ಆಯ್ಕೆಗೊಂಡವರು: ಕುಲವನಹಳ್ಳಿ ಕ್ಷೇತ್ರ ನಾರಾಯಣ್‌ಸ್ವಾಮಿ, ಶಿವಗಂಗೆ ಕ್ಷೇತ್ರ ನರಸಿಂಹಮೂರ್ತಿ, ಮಹಿಳಾ ಮೀಸಲು ದೊಡ್ಡಬೆಲೆ ಕ್ಷೇತ್ರ ಗಂಗ ಲಕ್ಷ್ಮಮ್ಮ, ಟಿ.ಬೇಗೂರು ಕ್ಷೇತ್ರ ಜಯಮ್ಮ, ಪ.ಜಾತಿ ಮೀಸಲು ಗೊಲ್ಲಹಳ್ಳಿ ಕ್ಷೇತ್ರ ವೆಂಕಟಲಕ್ಷ್ಮಮ್ಮ, ಪ.ಪಂಗಡ ಮೀಸಲು ಸೋಂಪುರ ಕ್ಷೇತ್ರ ಪ್ರಕಾಶ್ ಸೇರಿ ಪ್ರವರ್ಗ ಎ ಮೀಸಲು ನರಸೀಪುರ ಕ್ಷೇತ್ರ ಸಾಧಿಕ್ ಪಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎನ್‌ಡಿಎ ಬೆಂಬಲಿತರಿಗೆ ಜಯ: ನೆಲಮಂಗಲ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎನ್‌ಡಿಎ ಬೆಂಬಲಿತ ನಿರ್ದೇಶಕರನ್ನು ಅಭಿನಂದಿಸಲಾಯಿತು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯಣ್ಣ, ಉದ್ಯಮಿ ಬೈರೇಗೌಡ, ಎಸ್.ಮಲ್ಲಯ್ಯ, ಟಿಎಪಿಸಿಎಂಎಸ್ ನಿರ್ದೇಶಕ ಸಂಪತ್, ಸೋಂಪುರ ವಿಎಸ್ಸೆಸ್ಸೆನ್ ಅಧ್ಯಕ್ಷ ಮೋಹನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net