

ಸೋಮವಾರಪೇಟೆ: ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಫೆಡರೇಷನ್ ವತಿಯಿಂದ ಕನಕಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಕೊಡಗಿನ 7 ಜನರು ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಪರೀಕ್ಷೆಯಲ್ಲಿ 20 ಜನರು ಪಾಲ್ಗೊಂಡಿದ್ದರು. ಕೊಡಗಿನ ಶರಣ್ಯ ಎ.ಶೆಟ್ಟಿ, ಬಿ.ಕೆ. ಮನ್ವಿತ್‌ಮೋಹನ್, ಸುರೇಶ್ ಪೂಜಾರಿ, ವೃಂದ, ಎನ್.ಎಸ್. ಅಜಯ್, ಪಿ. ಯಶಸ್ ಮತ್ತು ಯು.ಸಿ. ಕೃತಿಕ್ ರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆಯಾದರು.
ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಾಸ್ಟರ್, ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಎನ್.ಸಿ. ಸುದರ್ಶನ್, ಹಿರಿಯ ತರಬೇತುದಾರ ಹೊನ್ನಗಂಗಪ್ಪ ಇದ್ದರು.