ಹುಚ್ಚುನಾಯಿ ದಾಳಿಯಿಂದ 7 ಜನರಿಗೆ ಗಾಯ

Mag dog attack
Published on

ರಟ್ಟಿಹಳ್ಳಿ: ಹುಚ್ಚುನಾಯಿ ಕಡಿತದಿಂದಾಗಿ 7 ಜನ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ನಾಗವಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಗ್ರಾಮದ ರುದ್ರಪ್ಪ ಸೊಂಟೇರ, ರೇಖಾ ಮಾಸೂರು, ಶಕೀರಾ ಗುಬ್ಬಿ , ಮಾರುತಿ ಕೊಪ್ಪದ, ಸಾವಕ್ಕ ಹಿತ್ತಲಮನಿ, ಸತೀಶ ಕೊಟಗಿಮನಿ ಮತ್ತು ಚನ್ನಬಸಪ್ಪ ಗುಡ್ಡದಹಳ್ಳಿ ಅವರು ಹುಚ್ಚು ನಾಯಿ ಕಡಿತಕ್ಕೆ ಒಳಗಾದವರು.

ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಏಳು ಜನರಿಗೆ ಸಕಾಲದಲ್ಲಿ ತಡಕನಹಳ್ಳಿ ವೈದ್ಯಾಧಿಕಾರಿ ಡಾ.ಲೋಕೇಶ ಕುಮಾರ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. 7 ಜನರಲ್ಲಿ ಐವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಎಲ್ಲ 7 ಜನರು ಆರೋಗ್ಯ ಸ್ಥಿರವಾಗಿದೆ.

ಹುಚ್ಚು ನಾಯಿ 7 ಜನರಿಗೆ ಕಚ್ಚಿ ಗಾಯಗೊಳಿಸದ್ದಲ್ಲದೆ, ಸುಮಾರು 8-10 ಬೀದಿನಾಯಿಗಳಿಗೂ ಕಚ್ಚಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಹುಚ್ಚು ನಾಯಿ ಸೋಮವಾರ ಸಂಜೆಯೇ ಮೃತಪಟ್ಟಿದೆ.

ಈಗಾಗಲೇ ಹುಚ್ಚು ನಾಯಿ ಮೃತಪಟ್ಟಿದೆ. ಬೀದಿನಾಯಿಗಳನ್ನು ಶೀಘ್ರವೇ ಬೇರೆಡೆ ಸಾಗಿಸಲಾಗುವುದು. ಎಲ್ಲ ಸಾಕು ನಾಯಿಗಳಿಗೆ ರೇಬಿಸ್ ಚುಚ್ಚಮದ್ದನ್ನು ಪಶು ಆಸ್ಪತ್ರೆಯಲ್ಲಿ ಕೊಡಿಸಬೇಕು ಎಂದು ತಿಳಿಸಲಾಗಿದೆ.I ಮನುಕುಮಾರ ಪಿಡಿಒ ನಾಗವಂದ ಗ್ರಾಮ ಪಂಚಾಯಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net