ಸೇತುವೆ ಮೇಲಿಂದ ಉರುಳಿಬಿದ್ದ ಟ್ರ್ಯಾಕ್ಟರ್​; ಕಬ್ಬು ಕಟಾವು ಮಾಡಲು ಹೋಗುತ್ತಿದ್ದ ಏಳುಮಂದಿ ದುರ್ಮರಣ

Accident 8 Feb 20
Published on

ಬೆಳಗಾವಿ: ಇಲ್ಲಿನ ಇಟಗಿ ಗ್ರಾಮದ ಬಳಿ ಸೇತುವೆ ಮೇಲಿನಿಂದ ಟ್ರ್ಯಾಕ್ಟರ್​ ಬಿದ್ದು ಏಳು ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ.

ಖಾನಾಪುರ ತಾಲೂಕಿನ ಇಟಗಿ-ಬೋಗೂರ ಗ್ರಾಮದ ಮಧ್ಯದ ಸೇತುವೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಬೋಗೂರ ಗ್ರಾಮದವರಾಗಿದ್ದು ಇಟಗಿಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದರು.

ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೆ ಮೂರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಹಲವರು ಗಾಯಗೊಂಡಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net