ಜೂಜಾಡುತ್ತಿದ್ದ 7 ಜನರ ಬಂಧನ

arrest
Published on

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದ ಸರ್ಕಾರಿ ಆಸ್ಪತ್ರೆ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮಾವಿನಕಟ್ಟಾದ ಹರೀಶ ಗಣಪತಿ ನಾಯ್ಕ, ಲಂಬೋದರ ದೇವಪ್ಪ ನಾಯ್ಕ, ನಾಗರಾಜ ಶಂಕರ ದೇವಾಡಿಗ, ರಾಜೇಂದ್ರ ಮಂಜುನಾಥ ದೇವಾಡಿಗ, ಸಂತೋಷ ನಾರಾಯಣ ನಾಯ್ಕ, ಓಮು ವೆಂಕಟ ಗೌಡ, ಮಂಜುನಾಥ ಸುಕ್ರು ದೇವಾಡಿಗ ಬಂಧಿತರು. ಇವರೊಂದಿಗಿದ್ದ ಬೆಳ್ಳಂಬಿಯ ಗಜಾನನ ಮರಾಠಿ ಹಾಗೂ ಬಿಸ್ಲಕೊಪ್ಪದ ಗಣಪತಿ ರಾಮಾ ಗೌಡ ಪರಾರಿಯಾಗಿದ್ದಾರೆ. ಬಂಧಿತರಿಂದ 27,840 ರೂ. ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net