ಮೊದಲ ದಿನವೇ 7 ನಾಮಪತ್ರ ಸಲ್ಲಿಕೆ

Kageri-samudra-pooja
Published on

ಕಾರವಾರ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಶುಕ್ರವಾರದಿಂದ ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನವೇ 4 ಅಭ್ಯರ್ಥಿಗಳಿಂದ 7 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷದ ಗಣಪತಿ ಹೆಗಡೆ 2 ನಾಮಪತ್ರಗಳನ್ನು, ಭಾರತೀಯ ಜನತಾ ಪಕ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ 3 ನಾಮಪತ್ರಗಳನ್ನು , ಕರ್ನಾಟಕ ರಾಷ್ಟç ಸಮಿತಿಯ ವಿನಾಯಕ ನಾಯ್ಕ 1 ಹಾಗೂ ಪಕ್ಷೇತರ ಅಭ್ಯರ್ಥಿ ಕ್ರಿಶನ್ ಹನುಮಂತಪ್ಪ ಬಳೇಗಾರ 1 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಏಪ್ರಿಲ್ 13 ಎರಡನೇ ಶನಿವಾರ ಹಾಗೂ 14 ರಂದು ಭಾನುವಾರದ ನಿಮಿತ್ತ ಸರ್ಕಾರಿ ರಜಾ ದಿನವಿದೆ. ಏ.15 ರಿಂದ ಮತ್ತೆ ಉಮೇದುವಾರಿಕೆ ಸಲ್ಲಿಕೆಗೆ ಅವಕಾಶವಿದ್ದು, ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 20 ರಂದು ನಾಮಪತ್ರಗಳ ಪರಿಶೀಲನೆ, 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net