ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 7 ಪದಕ

mng_18 dic skating championship
ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮೈಸೂರಿನಲ್ಲಿ ಆಯೋಜಿಸಿದ 62ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಪದಕ ವಿಜೇತರಾದ ಜೆಸ್ನಿಯಾ ಕೊರೆಯಾ, ಡ್ಯಾಶಿಯೆಲ್ ಅಮಾಂಡಾ ಕಾನ್ಸೆಸ್ಸಾವೊ ಮತ್ತು ಪಿ.ಶಾಲೋಮ್ ಕ್ರಿಸ್ಟನ್.
Published on

ಮಂಗಳೂರು: ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮೈಸೂರಿನಲ್ಲಿ ಆಯೋಜಿಸಿದ 62ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 7 ಪದಕಗಳು ಲಭಿಸಿದೆ.

ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ಸ್‌ಗಳಾದನ ಜೆಸ್ನಿಯಾ ಕೊರೆಯಾ, ಡ್ಯಾಶಿಯೆಲ್ ಅಮಾಂಡಾ ಕಾನ್ಸೆಸ್ಸಾವೊ ಮತ್ತು ಪಿ.ಶಾಲೋಮ್ ಕ್ರಿಸ್ಟನ್ ಈ ಸಾಧನೆ ಮಾಡಿದ್ದು 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಜೆಸ್ನಿಯಾ ಕೊರೆಯಾ 500 ಮೀಟರ್ ರಿಂಕ್ ರೇಸ್ ಹಾಗೂ ವನ್ ಲ್ಯಾಪ್ ರೋಡ್ ರೇಸ್‌ನಲ್ಲಿ 2 ಬೆಳ್ಳಿ ಪದಕ ಹಾಗೂ 1,500 ಮೀಟರ್ ರಿಂಕ್ ರೇಸ್‌ನಲ್ಲಿ 1 ಕಂಚಿನ ಪದಕಗಳನ್ನ ಗೆದ್ದಿದ್ದಾರೆ. ಡ್ಯಾಶಿಯೆಲ್ ಅಮಾಂಡಾ ಕಾನ್ಸೆಸ್ಸಾವೊ ಅವರು 17 ವರ್ಷಕ್ಕಿಂತ ಮೇಲ್ಪಟ್ಟ ಮಿಶ್ರ ಬಾಲಕಿಯರ ವಿಭಾಗದ ರಿಲೇಯಲ್ಲಿ 2 ಬೆಳ್ಳಿ ಪದಕ ಹಾಗೂ 500 ಮೀಟರ್ ರಿಂಕ್ ರೇಸ್‌ನಲ್ಲಿ 1 ಕಂಚಿನ ಪದಕ ಗೆದ್ದಿದ್ದಾರೆ. ಪಿ.ಶಾಲೋಮ್ ಕ್ರಿಸ್ಟನ್‌ರವರು ವನ್‌ಲ್ಯಾಪ್ ರೋಡ್ ರೇಸ್‌ನಲ್ಲಿ 1 ಕಂಚಿನ ಪದಕ ಗೆದ್ದಿದ್ದಾರೆ.

ಸ್ಕೇಟರ್ ಗಳಿಗೆ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರರಾದ ಮೋಹನ್ ದಾಸ್ ಕೆ, ಜಯರಾಜ್ ಮತ್ತು ರಮಾನಂದ ಕೆ ವಿ ಅವರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net