ಮನೆ ಹಿತ್ತಲಲ್ಲಿ ಬೆಳೆಸಿದ್ದ 7 ಕೆಜಿ 455 ಗ್ರಾಂ ಗಾಂಜಾ ಪತ್ತೆ

17 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಕರಡಿಗುಡ್ಡ ಗ್ರಾಮದ ವ್ಯಕ್ತಿಯೊಬ್ಬ ಮನೆ ಹಿತ್ತಲಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ, ಅಪರಾಧ ಪೊಲೀಸ್ ಠಾಣೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಸುಮಾರು 7 ಕೆಜಿ 455 ಗ್ರಾಂ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಆರೋಪಿ ಶಿವಪ್ಪ ಕೋಟೂರ ಎಂಬಾತನನ್ನುಬಂಧಿಸಿದ್ದಾರೆ. ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ಮತ್ತು ಸಿಇಎನ್ ಠಾಣೆ ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುರುಗೇಶ ಟಿ.ಎಸ್., ಪಿಎಸ್‌ಐ ಲಕ್ಷ್ಮೀ ದೇಗಿನಾಳ, ಸಿಬ್ಬಂದಿಯಾದ ಯು.ಡಿ. ದೂದಾಳಕರ, ಎಂ.ಬಿ. ಕಂಬೋಗಿ, ಬಸವರಾಜ ಶಿರಕೋಳ, ಡಿ.ಎಂ. ಬಳಿಗೇರ, ಪಿ.ಸಿ ಬಾಗಲಕೋಟಿ, ಎಸ್.ಐ. ಜವಳಿ, ಎನ್.ಬಿ. ಕರಜಗಿ, ಬಿ.ಆರ್. ಬನಹಟ್ಟಿ, ವೈ.ಎಚ್. ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net