ರಾಷ್ಟ್ರೀಯಮಟ್ಟದ ಕರಾಟೆಯಲ್ಲಿ 7 ಚಿನ್ನ, 1 ಬೆಳ್ಳಿ

6 bangarpete 2
Published on

ಬಂಗಾರಪೇಟೆ: ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 13ನೇ ರಾಷ್ಟ್ರೀಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಜಪಾನ್​ ಶಿಟೋ ರಾಯ್​ ಕರಾಟೆ ಡೊ -ಇಂಡಿಯಾ ಶಾಲೆಯ 8 ಮಂದಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಹಿರಿಯ ತರಬೇತುದಾರ ರಾಜು ತಿಳಿಸಿದರು.

ಪಟ್ಟಣದ ಎಪಿಎಂಸಿ ಬಳಿಯ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್​, ಧನುಷ್​, ಅಕ್ಷಯ್​ಗೌಡ, ಶಶಾಂತ, ರಿಯಾನ್​, ನಿತಿನ್​, ಪೂರ್ವಿಕಾ, ಆದಮ್​ ಎಂಬುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, 7 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಕಠಿಣ ಸ್ಪರ್ಧೆಗಳ ನಡುವೆಯೂ, ಬಂಗಾರಪೇಟೆಯ ಮಕ್ಕಳು ಸಾಧನೆ ಮಾಡಿದ್ದಾರೆ ಎಂದರು. ಸಹಾಯಕ ತರಬೇತುದಾರರಾದ ಸೌಮ್ಯಾ, ದಾಮೊಧರರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net