‘ಬಾಡಿಗೆ ಬಾಕಿ’ 7 ಪಪಂ. ವಾಣಿಜ್ಯ ಮಳಿಗೆಗಳಿಗೆ ಬೀಗ

25NRGL1- Malige
Published on

ನರೇಗಲ್ಲ: ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಪಟ್ಟಣ ಪಂಚಾಯಿತಿಯ 7 ವಾಣಿಜ್ಯ ಮಳಿಗೆಗಳಿಗೆ ಶುಕ್ರವಾರ ಪ.ಪಂ ಅಧಿಕಾರಿಗಳು, ಸಿಬ್ಬಂದಿ ಬೀಗ ಹಾಕಿದರು.

ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ವರ್ತಕರು ಪ.ಪಂಗೆ ಬಾಡಿಗೆ ಪಾವತಿಸದೇ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದರು. ಇತ್ತೀಚೆಗೆ ಜರುಗಿದ ಪ.ಪಂ. ಸಾಮನ್ಯ ಸಭೆಯಲ್ಲಿ ಶಾಸಕ ಜಿ.ಎಸ್. ಪಾಟೀಲ ವಾಣಿಜ್ಯ ಮಳಿಗೆಗಳ ಬಾಕಿ ವಸೂಲಾತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಬಾಡಿಗೆ ಹಣ ಕಟ್ಟುವಂತೆ ಪ.ಪಂ. ಅಧಿಕಾರಿಗಳು ವರ್ತಕರಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ನೋಟಿಸ್ ನೀಡದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಹಾಗಾಗಿ ಮಳಿಗೆಗಳಿಗೆ ಬೀಗ ಹಾಕುವ ಮೂಲಕ ವರ್ತಕರಿಗೆ ಶಾಕ್ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪ.ಪಂ. ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವ ವರ್ತಕರು ಬಾಡಿಗೆ ಹಣ ನೀಡಿದ್ದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಶುಕ್ರವಾರ 7 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಅವುಗಳಿಂದ ಸುಮಾರ 8 ಲಕ್ಷದ 8 ಸಾವಿರ ರೂ. ಬಾಡಿಗೆ ಬಾಕಿ ಇದೆ. ಬಾಡಿಗೆ ಕಟ್ಟಲು ಸಾಕಷ್ಟು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಬೀಗ ಹಾಕಲಾಗಿದೆ ಎಂದು ಮುಖ್ಯಾಧಿಕಾರಿಗಳು ಮಹೇಶ ನಿಡಶೇಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net