

ಹುಬ್ಬಳ್ಳಿ: ತಾಲೂಕಿನ ತಾರಿಹಾಳ ಬಳಿಯ ಮದ್ಯದಂಗಡಿಯ ವ್ಯವಸ್ಥಾಪಕರೊಬ್ಬರು ಅಂಗಡಿಯಲ್ಲಿ ಸಂಗ್ರಹವಾಗಿದ್ದ 7.97 ಲಕ್ಷ ರೂ. ಬ್ಯಾಂಕ್‌ಗೆ ಜಮಾ ಮಾಡದೇ ವಂಚಿಸಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲಹೊಂಗಲ ತಾಲೂಕಿನ ಮಹಾಂತೇಶ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಫೆ. 6ರಿಂದ ಫೆ. 27ರ ಅವಧಿಯಲ್ಲಿ ಮದ್ಯದಂಗಡಿಯಲ್ಲಿ ಒಟ್ಟು 7.97 ಲಕ್ಷ ರೂ. ಸಂಗ್ರಹವಾಗಿತ್ತು. ಇದನ್ನು ಬ್ಯಾಂಕ್‌ಗೆ ಜಮಾ ಮಾಡಲು ವೈನ್‌ಶಾಪ್‌ನ ಮಾಲೀಕರು ಸೂಚಿಸಿದ್ದರು. ಆದರೆ ಬ್ಯಾಂಕ್‌ಗೆ ಕಟ್ಟದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದ. ಕೇಳಿದರೆ ಮರಳಿ ನೀಡುವುದಾಗಿ ಹೇಳಿದ್ದ. ಆದರೀಗ ಹಣ ವಾಪಸ್ ನೀಡದೇ ವಂಚಿಸಿದ್ದಾನೆ ಎಂದು ಮಾಲೀಕ ನವೀನ ದೂರಿನಲ್ಲಿ ವಿವರಿಸಿದ್ದಾರೆ.