

ಹುಬ್ಬಳ್ಳಿ: ಹಣ ಹೂಡಿಕೆ ಮಾಡಿ ಲಾಭ ಕೊಡಿಸುವ ನೆಪದಲ್ಲಿ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ 7.64 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಸುನಯ ವಂಚನೆಗೆ ಒಳಗಾದವರು. ದೆಹಲಿ ಮೂಲದ ಅಶೋಕ ದನಕರ ಎಂಬಾತ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಸೆಟ್ ಸೈಲ್ ಕಮ್ಯುನಿಕೇಷನ್ ಸೇರ್ಪಡೆ ಮಾಡಿದಲ್ಲದೆ, ಅಕ್ಕಿ ಫೈನಾನ್ಸಿಯಲ್ ಸೆಕ್ಯೂರಿಟಿ ವೆಬ್‌ಸೈಟ್ ಐಡಿ ಕ್ರಿಯೇಟ್ ಮಾಡಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾನೆ. ನಂತರ ಸುನಯ ಅವರಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.